ಬಿಜೆಪಿಯಿಂದ ಡಿಕೆ ಶಿವಕುಮಾರ್ಗೆ ಡಿಸಿಎಂ ಆಫರ್: ಅಸಲಿ ಸತ್ಯ ಬಿಚ್ಚಿಟ್ಟ ಆರ್ ಅಶೋಕ್
ಬಿಜೆಪಿಯಿಂದ ಡಿಸಿಎಂ ಹುದ್ದೆ ಆಫರ್ ಬಂದಿತ್ತು ಎಂಬ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಆಫರ್ ಕರೆ ಮಾಡಿದವರು ಯಾರು, ಯಾವಾಗ, ಯಾವ ನಂಬರ್‌ನಿಂದ ಕರೆ ಮಾಡಿದರು ಎಂಬುದನ್ನು ಡಿಕೆ ಶಿವಕುಮಾರ್ ಬಹಿರಂಗಪಡಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ. ಇದು ಕಾಂಗ್ರೆಸ್ ನಾಯಕತ್ವಕ್ಕೆ, ವಿಶೇಷವಾಗಿ ಸಿದ್ದರಾಮಯ್ಯನವರಿಗೆ ನೀಡಿದ ಬೆದರಿಕೆ ಸಂದೇಶ ಎಂದು ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 16: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿಯಿಂದ ಡಿಸಿಎಂ ಸ್ಥಾನದ ಆಫರ್ ಬಂದಿತ್ತು ಎಂಬ ಹೇಳಿಕೆಯ ಕುರಿತು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹೇಳಿಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಸಿದ್ದರಾಮಯ್ಯನವರಿಗೆ ಡಿಕೆಶಿ ನೀಡಿದ ಬೆದರಿಕೆ ಸಂದೇಶ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ. ಯಾರು ಕರೆ ಮಾಡಿದ್ದರು, ಯಾವಾಗ ಕರೆ ಮಾಡಿದ್ದರು, ಯಾವ ನಂಬರ್‌ನಿಂದ ಕರೆ ಮಾಡಿದ್ದರು ಎಂಬುದನ್ನು ಡಿಕೆ ಶಿವಕುಮಾರ್ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಹೇಳಿಕೆಯು ಕಾಂಗ್ರೆಸ್ ನಾಯಕತ್ವಕ್ಕೆ ಸವಾಲು ಹಾಕುವ ಉದ್ದೇಶದಿಂದ ನೀಡಲಾಗಿದೆ. ಒಂದು ವೇಳೆ ಅಧಿಕಾರ ಹಂಚಿಕೆ ಆಗದಿದ್ದರೆ, ಡಿಕೆ ಶಿವಕುಮಾರ್ ಬೇರೆ ದಾರಿ ಹಿಡಿಯಬಹುದು ಎಂಬ ಸಂದೇಶವನ್ನು ಈ ಹೇಳಿಕೆಯ ಮೂಲಕ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಕ್ರಾಂತಿ ಆಗುವ ಮುನ್ಸೂಚನೆಗಳನ್ನು ಈ ಘಟನೆಗಳು ನೀಡುತ್ತಿವೆ ಎಂದೂ ಅಶೋಕ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
