Loading video

ಬಿಜೆಪಿ ಸ್ವಂತ ಬಲದಲ್ಲಿ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್​ವರೆಗೆ ಅಧಿಕಾರಕ್ಕೆ ಬರುವ ತಯಾರಿಯಲ್ಲಿದೆ: ಪ್ರೀತಂ ಗೌಡ

Updated on: Jun 18, 2025 | 8:51 PM

ರಾಜ್ಯ ವಿಧಾನಸಭೆಗೆ 2023 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೈಲಿ ಸೋಲು ಅನುಭವಿಸಿದರೂ ಮುಂದಿನ ಅಸೆಂಬ್ಲಿ ಇಲ್ಲವೇ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯುವ ಬಗ್ಗೆ ಪ್ರೀತಂ ಗೌಡ ವಿಶ್ವಾಸ ಹೊಂದಿದ್ದಾರೆ. ಅಸೆಂಬ್ಲಿಗೆ ಇಲ್ಲದಿದ್ದರೆ ವಿಧಾನ ಪರಿಷತ್, ಸಂಸತ್ ಇಲ್ಲದಿದ್ದರೆ ರಾಜ್ಯಸಭಾ ಸದಸ್ಯ ಆಗೇ ಆಗುತ್ತೇನೆ ಎಂದು ಅವರು ಖಚಿತವಾದ ಧ್ವನಿಯಲ್ಲಿ ಹೇಳುತ್ತಾರೆ.

ಬೆಂಗಳೂರು, ಜೂನ್ 18: ನಗರದಲ್ಲಿ ಆಯೋಜಿಲಾಗಿದ್ದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ
ಭಾಗಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಶಾಸಕ ಪ್ರೀತಂ ಜೆ ಗೌಡ (Preetham J Gowda) ಅವರು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪಕ್ಷದವರಗೆ ಹೇಳಿರುವ ಮಾತಿಗೆ ಪ್ರತಿಕ್ರಿಯೆ ನೀಡಿದರು. ಅವರೊಬ್ಬ ಪ್ರಭಾವೀ ನಾಯಕ ಮತ್ತು ಜೆಡಿಎಸ್ ಎನ್​ಡಿಎ ಮೈತ್ರಿಕೂಟದ ಪ್ರಮುಖ ಸದಸ್ಯ, ರಾಜ್ಯದಲ್ಲಿ ಕೇವಲ ಪಕ್ಷಗಳ ಸಂಘಟನೆ ಕೆಲಸ ಮಾತ್ರ ನಡೆಯುತ್ತದೆ, ಪ್ರಮುಖ ನಿರ್ಧಾರ ಮತ್ತು ತೀರ್ಮಾನಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ದೆಹಲಿಯಲ್ಲಿ ಚರ್ಚಿಸಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಬಿಜೆಪಿ ತನ್ನ ಸ್ವಂತ ಬಲದಲ್ಲಿ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಪಾರ್ಲಿಮೆಂಟ್​​ವರೆಗೆ ಅಧಿಪತ್ಯ ಸಾಧಿಸುವ ತವಕದಲ್ಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  Bengaluru Stampede; ಸಿಎಂ ಮತ್ತು ಡಿಸಿಎಂ ನಡುವಿನ ಪ್ರತಿಷ್ಠೆಯ ಕಾಳಗಕ್ಕೆ ಅಮಾಯಕ ಮಕ್ಕಳು ಬಲಿ: ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ