Bengaluru Potholes: ರಸ್ತೆಗುಂಡಿ ಮುಚ್ಚದ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ: ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜು

Updated on: Sep 24, 2025 | 10:31 AM

ಬೆಂಗಳೂರಿನಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳ ವಿಚಾರವಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯದಾದ್ಯಂತ ಒಂದು ಗಂಟೆಗಳ ಕಾಲ ರಸ್ತೆಯನ್ನು ತಡೆಹಿಡಿಯುವ ಮೂಲಕ ಪ್ರತಿಭಟನೆ ನಡಯುತ್ತಿದೆ. ಯಲಹಂಕಾದ ಓಲ್ಡ್ ಟೌನ್ ನ ಕೆಂಪೇಗೌಡ ವಾರ್ಡ್ನಲ್ಲಿ ಗುಂಡಿ ಮುಚ್ಚುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಿತು.ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿಈ ಹೋರಾಟ ನಡೆದಿದೆ. ಅದರ ವೀಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಸೆಪ್ಟೆಂಬರ್ 24: ನಗರದಲ್ಲಿ ರಸ್ತೆ ಗುಂಡಿಗಳಿಂದ ಸಮಸ್ಯೆಗೊಳಗಾಗದವರು ಯಾರೂ ಇಲ್ಲ. ಟೆಕ್ಕಿಗಳ ಟ್ವೀಟ್​​ಗಳಿಂದ ಹಿಡಿದು ನೆಟ್ಟಿಗರು ಕಾಮೆಂಟ್​ಗಳವರೆಗೂ ಈ ಅವ್ಯವಸ್ಥೆ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ರಸ್ತೆ ಗುಂಡಿ ವಿಚಾರವಾಗಿ ಇಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮುಂದಾಗಿದೆ. ರಸ್ತೆ ಗುಂಡಿ ವಿಚಾರದಲ್ಲಿ ಸಿಎಂ, ಡಿಸಿಎಂ ವರ್ತನೆ ಖಂಡಿಸಿ ಹಾಗೂ ತಕ್ಷಣ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1 ಗಂಟೆಗಳ ಕಾಲ ರಸ್ತೆ ತಡೆಯಲಾಗುತ್ತಿದೆ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನ ಯಲಹಂಕ ಓಲ್ಡ್ ಟೌನ್​ನ ಕೆಂಪೇಗೌಡ ವಾರ್ಡ್​ನಲ್ಲಿ ಗುಂಡಿ ಮುಚ್ಚುವ ಮೂಲಕ ಸಾಂಕೇತಿಕವಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ