ಮುಸಲ್ಮಾನರಿಗೆ ಮೀಸಲಾತಿ ನೀಡಿದ್ದನ್ನು ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಉಗ್ರವಾಗಿ ವಿರೋಧಿಸುತ್ತದೆ: ವಿಜಯೇಂದ್ರ

|

Updated on: Mar 19, 2025 | 12:17 PM

ರಾಜ್ಯದ ಸಿದ್ದರಾಮಯ್ಯ ಸರ್ಕಾರವು ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇಕಡ 4 ಮೀಸಲಾತಿ ನೀಡಿರುವುದನ್ನು ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ವಿರೋಧಿಸುತ್ತದೆ, ಕದ್ದು ಮುಚ್ಚಿ ಮಸೂದೆಯನ್ನು ರಾಜ್ಯ ಸರ್ಕಾರ ಪಾಸು ಮಾಡಿದೆ, ಇದು ಕಾನೂನುಬಾಹಿರ, ಹಾಗೆ ಮೀಸಲಾತಿ ನೀಡಲು ಬರಲ್ಲ, ಸರ್ಕಾರದ ತುಘಲಕ್ ನೀತಿಯನ್ನು ಬಿಜೆಪಿ ಖಂಡಿಸುತ್ತದೆ ಎಂದು ವಿಜಯೇಂದ್ರ ಹೇಳಿದರು.

ಬೆಂಗಳೂರು, 19 ಮಾರ್ಚ್: ರಾಜ್ಯ ಸರ್ಕಾರ ಹೇಳುವಂತೆ ಬಿಜೆಪಿ ಮುಸ್ಲಿಂ ಅಥವಾ ಅಲ್ಪಸಂಖ್ಯಾತ ವಿರೋಧಿ ಪಕ್ಷ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಮುಸ್ಲಿಂ ಮಹಿಳೆಯರನ್ನು ನಿರಂತರವಾಗಿ ಶೋಷಣೆಗೆ ಗುರಿಮಾಡಿದ್ದ ಟ್ರಿಪಲ್ ತಲಾಖ್ (Triple Talaq) ಕಾನೂನನ್ನು ರದ್ದು ಮಾಡಿ ಅವರನ್ನು ದೌರ್ಜನ್ಯಗಳಿಂದ ಮುಕ್ತ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಉಜ್ವಲ ಮತ್ತು ಇತರ ಹಲವಾರು ಯೋಜನೆಗಳು ಕೇವಲ ಹಿಂದೂ ಮಹಿಳೆಯರಿಗೆ ರೂಪಿಸಲಾಗಿಲ್ಲ, ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಎಲ್ಲ ಧರ್ಮದ ಮಹಿಳೆಯರ ಅಭ್ಯುದಯಕ್ಕಾಗಿ ಜಾರಿ ಮಾಡಿದ್ದರು ಎಂದು ವಿಜಯೇಂದ್ರ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜಮೀರ್ ಅಹ್ಮದ್ ಹೇಳಿದ ಕೂಡಲೇ ಏನೂ ಆಗಲ್ಲ: ಮುಸ್ಲಿಂ ಮೀಸಲಾತಿ ಹೆಚ್ಚಳ ಬಗ್ಗೆ ಪ್ರಲ್ಹಾದ್ ಜೋಶಿ ತಿರುಗೇಟು