ನಮ್ಮ ಪಕ್ಷದಲ್ಲಿ ವಂಶವಾದ, ಭ್ರಷ್ಟಾಚಾರ ನಡೆಯೋದಿಲ್ಲ, ಅಪ್ಪನ ಸ್ಥಾನಕ್ಕೆ ಮಗ ಬರುವಂತಿಲ್ಲ: ಯತ್ನಾಳ್
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸದಿದ್ದರೂ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನ ಪರವಾಗಿ ಪ್ರಚಾರ ಮಾಡಿದೆ, ಬೊಮ್ಮಾಯಿ ಸೋತಿದ್ದು ದುರದೃಷ್ಟಕರ, ಯಾಕೆಂದರೆ ಅವರು ಕ್ಷೇತ್ರಕ್ಕಾಗಿ ಬಹಳ ಕೆಲಸ ಮಾಡಿದ್ದಾರೆ, ಕಾಂಗ್ರೆಸ್ ₹ 100 ಕೋಟಿ ಖರ್ಚು ಮಾಡಿ ಚುನಾವಣೆ ಗೆದ್ದಿದೆ, ಆದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಗೆ ಮಹಾರಾಷ್ಟ್ರದಲ್ಲಿ ಆದಂಥ ಸ್ಥಿತಿ ಎದುರಾಗಲಿದೆ ಎಂದು ಯತ್ನಾಳ್ ಹೇಳಿದರು.
ವಿಜಯಪುರ: ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಮಾಡುವ ವಾಗ್ದಾಳಿ ನಿಲ್ಲಲಾರದು. ವಿಜಯಪುರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ, ಬಿಜೆಪಿಯಲ್ಲಿ ಭ್ರಷ್ಟಾಚಾರ ಮತ್ತು ವಂಶವಾದ ನಡೆಯುವುದಿಲ್ಲ, ಪಕ್ಷಕ್ಕಾಗಿ ಹಗಲು ರಾತ್ರಿ, ಸೈಕಲ್ ತುಳಿಯುತ್ತಾ ದುಡಿದಿದ್ದೇವೆ ಅಂತ ಯಡಿಯೂರಪ್ಪ ಹೇಳೋದಾದರೆ, ಅದಕ್ಕೆ ತಕ್ಕಂತೆ ಅವರು ಅಧಿಕಾರವನ್ನೂ ಅನುಭವಿಸಿದ್ದಾರೆ, ನಾಲ್ಕು ಸಲ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ, ನಾವು ಸಹ ಸಹ ಸೈಕಲ್ ತುಳಿಯುತ್ತಾ ಪಕ್ಷಕ್ಕಾಗಿ ದುಡಿದಿದ್ದೇವೆ, ನಮ್ಮಲ್ಲೇನೂ ಕಾರಿರಲಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವರಿಷ್ಠರು ಅನುಮತಿ ನೀಡಿರುವುದಕ್ಕಾಗೇ ಕೇಂದ್ರ ಸಚಿವರು ನಮ್ಮ ಹೋರಾಟದಲ್ಲಿ ಭಾಗಿ: ಯತ್ನಾಳ್