Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿಗರಿಂದ ಭಾರತೀಯ ಸಂಸ್ಕೃತಿ ಆಚರಣೆ: ವಿಡಿಯೋ ಪೋಸ್ಟ್ ಮಾಡಿದ ಪ್ರಧಾನಿ ಮೋದಿ

ವಿದೇಶಿಗರಿಂದ ಭಾರತೀಯ ಸಂಸ್ಕೃತಿ ಆಚರಣೆ: ವಿಡಿಯೋ ಪೋಸ್ಟ್ ಮಾಡಿದ ಪ್ರಧಾನಿ ಮೋದಿ

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2024 | 5:41 PM

PM Narendra Modi posts video on Indian culture: ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಪ್ರತಿಧ್ವನಿಸುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಎಲ್ಲೇ ಹೋದರೂ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಸಾಕಷ್ಟು ಉತ್ಸಾಹ ಇರುವುದನ್ನು ಕಾಣುತ್ತೇನೆ. ಅದನ್ನು ಕಂಡು ಬಹಳ ಖುಷಿಯಾಗುತ್ತದೆ. ಈ ಅಪೂರ್ವ ಕ್ಷಣಗಳ ಒಂದು ಝಲಕ್ ಇಲ್ಲಿದೆ ಎಂದು ಮೋದಿ ಬರೆದಿದ್ದಾರೆ.

ಜಗತ್ತಿನ ಹಲವಾರು ದೇಶಗಳಲ್ಲಿ ಭಾರತೀಯ ಸಮುದಾಯದವರು ನೆಲಸಿದ್ದಾರೆ. ಅಲ್ಲಿ ಕೆಲಸಕ್ಕೆ ಹೋಗಿರುವವರು, ಅಲ್ಲಿಯೇ ಜೀವನ ಕಟ್ಟಿಕೊಂಡಿರುವವರು ಬಹಳ ಇದ್ದಾರೆ. ಭಾರತೀಯರು ಎಲ್ಲೇ ಹೋದರೂ ತಮ್ಮ ಮೂಲ ಸಂಸ್ಕೃತಿ, ಸಂಪ್ರದಾಯಗಳನ್ನು ಸಾಮಾನ್ಯವಾಗಿ ಕಳಚಿಡುವುದಿಲ್ಲ. ಸಾಗರದಾಚೆ ಹೋದರೂ ತಮ್ಮ ಹಬ್ಬ, ಹರಿದಿನಗಳನ್ನು ಮರೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ವಿದೇಶಗಳಲ್ಲಿ ಭಾರತೀಯರ ಸಂಸ್ಕೃತಿ, ಸಂಪ್ರದಾಯಗಳ ಅಭಿವ್ಯಕ್ತಿಸುವುದನ್ನು ಕಾಣಬಹುದು. ಪ್ರಧಾನಿಗಳು ವಿದೇಶಗಳಿಗೆ ಹೋದಾಗ ಅಲ್ಲಿರುವ ಭಾರತೀಯ ಸಮುದಾಯದರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆಂದು ಭಾರತೀಯರೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದುಂಟು. ಅದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುತ್ತವೆ. ಇದರಲ್ಲಿ ವಿದೇಶಗಳ ಸ್ಥಳೀಯ ಜನರು ಭಾರತೀಯ ಸಾಂಸ್ಕೃತಿಕ ದಿರುಸು ತೊಟ್ಟು ನೃತ್ಯಗಳನ್ನು ಮಾಡಿರುವುದುಂಟು. ಈ ಅಪೂರ್ವ ಕ್ಷಣಗಳನ್ನು ಸೆರೆಹಿಡಿದು ವಿಡಿಯೋ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಪ್ರತಿಧ್ವನಿಸುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಎಲ್ಲೇ ಹೋದರೂ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಸಾಕಷ್ಟು ಉತ್ಸಾಹ ಇರುವುದನ್ನು ಕಾಣುತ್ತೇನೆ. ಅದನ್ನು ಕಂಡು ಬಹಳ ಖುಷಿಯಾಗುತ್ತದೆ. ಈ ಅಪೂರ್ವ ಕ್ಷಣಗಳ ಒಂದು ಝಲಕ್ ಇಲ್ಲಿದೆ ಎಂದು ಮೋದಿ ಬರೆದಿದ್ದಾರೆ.

ಇದನ್ನೂ ಓದಿ: ಭಾರತದ ಜಲಾಂತರ್ಗಾಮಿ ನೌಕೆಯಿಂದ 3,500 ಕಿ.ಮೀ ವ್ಯಾಪ್ತಿಯ ಪರಮಾಣು ಸಾಮರ್ಥ್ಯದ ಕ್ಷಿಪಣಿ ಉಡಾವಣೆ ಯಶಸ್ವಿ

ಲಾವೋಸ್​ನಲ್ಲಿ ರಾಮಾಯಣ ಕಥಾನಕ, ರಷ್ಯಾದಲ್ಲಿ ಹರೇಕೃಷ್ಣ ಪ್ರಾರ್ಥನೆ, ಆಸ್ಟ್ರಿಯಾದಲ್ಲಿ ವಂದೇ ಮಾತರಂ, ಮಾಸ್ಕೋ ಮತ್ತು ಪೋಲ್ಯಾಂಡ್​ನಲ್ಲಿ ಗರ್ಬ ನೃತ್ಯ, ಕಜಾನ್​ನಲ್ಲಿ ಧೋಲಿಡಾ, ಭೂತಾನ್​ನಲ್ಲಿ ದಾಂಡಿಯಾ ರಾಸ್, ಸಿಂಗಾಪುರ್​ನಲ್ಲಿ ಭರತನಾಟ್ಯಂ, ಲಾವೋಸ್​ನಲ್ಲಿ ಬಿಹು, ಗಾಯತ್ರಿ ಮಂತ್ರ, ಬ್ರಜಿಲ್​ನಲ್ಲಿ ಹರಹರ ಮಹಾದೇವ ಮಂತ್ರಗಳನ್ನು ಸ್ಥಳೀಯರು ತೋರ್ಪಡಿಸಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ