ಶಿವಮೊಗ್ಗನಲ್ಲಿ ‘ಮುಗ್ಧ ಮಕ್ಕಳು’ ಕೇಸರಿ ಧ್ವಜ ಹಾರಿಸಿದ್ದು ತಪ್ಪಲ್ಲ ಅನ್ನುತ್ತಾರೆ ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ!!
ಮಾಧ್ಯಮದವರು ಹೊನ್ನಾಳಿ ಶಾಸಕರಿಗೆ ಪದೇಪದೆ ಅದೇ ಪ್ರಶ್ನೆಯನ್ನು ಕೇಳುತ್ತಾರೆ. ಒಮ್ಮೆಯಾದರೂ ಅವರು ವಿದ್ಯಾರ್ಥಿಗಳು ಮಾಡಿದ್ದು ಅಂತ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವರು ಪ್ರಶ್ನೆ ಪುನರಾರ್ತಿಸುತ್ತಾರೆ. ಆದರೆ ರೇಣುಕಾಚಾರ್ಯ ಸಂದರ್ಭಕ್ಕೆ ಅನುಗುಣವಾಗಿ ಮಕ್ಕಳು ಹಾಗೆ ಮಾಡಿರಬಹುದೆಂದು ಹೇಳುತ್ತಾರೆಯೇ ಹೊರತು ತಪ್ಪು ಅಂತ ಮಾತ್ರ ತಪ್ಪಿಯೂ ಹೇಳುವುದಿಲ್ಲ.
ಮೊನ್ನೆ ಶಿವಮೊಗ್ಗ ಸರ್ಕಾರೀ ಕಿರಿಯ ಕಾಲೇಜಿನಲ್ಲಿ (Shivamogga PU College) ವಿದ್ಯಾರ್ಥಿಗಳು ಕೇಸರಿ ಧ್ವಜವನ್ನು (Saffron Flag) ಹಾರಿಸಿದ್ದು ವಿವಾದ ಸೃಷ್ಟಿಸಿದೆ ಮತ್ತು ಧ್ವಜ ಹಾರಿಸಿದ ವಿದ್ಯಾರ್ಥಿಗಳ (students) ವಿರುದ್ಧ ಕ್ರಮ ಜರುಗಿಸಬೇಕೆಂಬ ಆಗ್ರಹ ಸಹ ಕೇಳಿಬರುತ್ತಿದೆ. ಅವರು ವಿದ್ಯಾರ್ಥಿಗಳಾಗಿರುವುದರಿಂದ ಕಾನೂನು ಕ್ರಮ ಜರುಗಿಸಿದರೆ ಅವರ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಆದರೆ ವಿದ್ಯಾರ್ಥಿಗಳು ಮಾಡಿದ್ದು ತಪ್ಪೆಂದು ಗೊತ್ತಿದ್ದರೂ ಬಿಜೆಪಿ ನಾಯಕರರು ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಆಶ್ಚರ್ಯ ಮೂಡಿಸಿದೆ. ಬಿಜೆಪಿ ಶಾಸಕ (BJP MLA) ಎಮ್ ಪಿ ರೇಣುಕಾಚಾರ್ಯ (MP Renukacharya) ಅವರು ಗುರುವಾರದಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದನ್ನು ಸಮರ್ಥಿಸಿಕೊಂಡರು. ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ತಡವರಿಸುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದರೆ, ವಿದ್ಯಾರ್ಥಿಗಳು ಮಾಡಿದ್ದು ತಪ್ಪು ಅಂತ ಮಾತ್ರ ಅವರ ಬಾಯಿಗೆ ಬರಲ್ಲ. ಅವರನ್ನು ಮುಗ್ಧ ವಿದ್ಯಾರ್ಥಿಗಳು ಅಂತ ಮೂರ್ನಾಲ್ಕು ಸಲ ಬಣ್ಣಿಸುತ್ತಾರೆ!
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ರೇಣುಕಾಚಾರ್ಯ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ವದಂತಿ ದಟ್ಟವಾಗಿದೆ. ಅವರು ತಪ್ಪು ಅಂತ ಹೇಳಿದ್ದರೆ ಸಚಿವನಾಗುವ ಚಾನ್ಸ್ ತಪ್ಪುತಿತ್ತು!
ಮಾಧ್ಯಮದವರು ಹೊನ್ನಾಳಿ ಶಾಸಕರಿಗೆ ಪದೇಪದೆ ಅದೇ ಪ್ರಶ್ನೆಯನ್ನು ಕೇಳುತ್ತಾರೆ. ಒಮ್ಮೆಯಾದರೂ ಅವರು ವಿದ್ಯಾರ್ಥಿಗಳು ಮಾಡಿದ್ದು ಅಂತ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವರು ಪ್ರಶ್ನೆ ಪುನರಾರ್ತಿಸುತ್ತಾರೆ. ಆದರೆ ರೇಣುಕಾಚಾರ್ಯ ಸಂದರ್ಭಕ್ಕೆ ಅನುಗುಣವಾಗಿ ಮಕ್ಕಳು ಹಾಗೆ ಮಾಡಿರಬಹುದೆಂದು ಹೇಳುತ್ತಾರೆಯೇ ಹೊರತು ತಪ್ಪು ಅಂತ ಮಾತ್ರ ತಪ್ಪಿಯೂ ಹೇಳುವುದಿಲ್ಲ.
ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದರೆ ಅದು ತಪ್ಪೆನಿಸುತಿತ್ತು. ತಿರಂಗಕ್ಕೆ ಭಾರತದ ಪ್ರತಿಯೊಬ್ಬ ನಾಗರಿಕ ಗೌರವ ನೀಡುತ್ತಾರೆ ಅಂತ ಹೇಳುತ್ತಾ ವಿಷಯಾಂತರ ಮಾಡುವ ಪ್ರಯತ್ನವನ್ನು ಸಚಿವಾಕಾಂಕ್ಷಿ ಶಾಸಕ ಮಾಡುತ್ತಾರೆ.