ಬಿಎಂಟಿಸಿ ಬಸ್​ ಚಾಲಕನ ಸಡನ್ ಬ್ರೇಕ್​​ಗೆ ಆಯತಪ್ಪಿ ಬಿದ್ದ ಮಹಿಳಾ ಕಂಡಕ್ಟರ್

Edited By:

Updated on: Jan 30, 2025 | 5:15 PM

ಬೆಂಗಳೂರಿನ ಬಿಎಂಟಿಸಿ ಬಸ್​​ನಲ್ಲಿ ಟಿಕೆಟ್ ಕಲೆಕ್ಟ್ ಮಾಡುತ್ತಿದ್ದ ಮಹಿಳಾ ಕಂಡಕ್ಟರ್ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಆಯತಪ್ಪಿ ಬಿದ್ದಿದ್ದಾರೆ. ಈ ಘಟನೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊಸರೋಡು ಕಡೆಗೆ ಹೋಗುತ್ತಿದ್ದ ಬಸ್​ನಲ್ಲಿ ನಡೆದಿದೆ. ಬಸ್​ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಪ್ರಯಾಣಿಕರು ಕಂಡಕ್ಟರ್ ಅವರನ್ನು ತಕ್ಷಣ ಎತ್ತಿದ್ದಾರೆ.

ಬೆಂಗಳೂರು, ಜನವರಿ 30: ಬಿಎಂಟಿಸಿ ಬಸ್ (BMTC bus)​ ಚಾಲಕ ದಿಢೀರ್​ ಬ್ರೇಕ್ ಹಾಕಿದ್ದಕ್ಕೆ ಆಯತಪ್ಪಿ ಮಹಿಳಾ‌‌ ಕಂಡಕ್ಟರ್​​ ಬಿದ್ದಿರುವಂತಹ ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ಎಲೆಕ್ಟ್ರಾನಿಕ್ ಸಿಟಿ ಟು ಹೊಸರೋಡ್​ಗೆ ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ನಡೆದಿದೆ. ಚಲಿಸುತ್ತಿದ್ದ ಬಸ್​ನಲ್ಲಿ ಮಹಿಳಾ‌‌ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡುತ್ತಿದ್ದರು. ಏಕಾಏಕಿ ಬ್ರೇಕ್ ಹಾಕಿದ ಕಾರಣ ಡೋರ್ ಬಳಿ ಹೋಗಿ ಬಿದಿದ್ದಾರೆ. ಆಯತಪ್ಪಿ ಬೀಳ್ಳುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಮಹಿಳಾ ಕಂಡಕ್ಟರ್ ಅನ್ನು ಪ್ರಯಾಣಿಕರು ಮೇಲೆತ್ತಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jan 30, 2025 05:15 PM