Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ ವಿನ್ನರ್ ಹನುಮಂತಗೆ ಚಿನ್ನ ಎನ್ನುವ ಮೋಕ್ಷಿತಾ ಜಗದೀಶ್​ಗೆ ಎಂಟರ್ಟೇನರ್ ಅನ್ನುತ್ತಾರೆ!

ಬಿಗ್ ಬಾಸ್ ಕನ್ನಡ ವಿನ್ನರ್ ಹನುಮಂತಗೆ ಚಿನ್ನ ಎನ್ನುವ ಮೋಕ್ಷಿತಾ ಜಗದೀಶ್​ಗೆ ಎಂಟರ್ಟೇನರ್ ಅನ್ನುತ್ತಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2025 | 4:42 PM

ಬಿಗ್ ಬಾಸ್ ವಿನ್ನರ್ ಹನುಮಂತನ ವ್ಯಕ್ತಿತ್ವವನ್ನು ಮೋಕ್ಷಿತಾ ಮೊದಲಿಗೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ, ಅದು ಸರಿಯೆನಿಸದ ಕಾರಣ ಅವರೊಂಥರಾ ಚಿನ್ನ ಎಂದು ಹೇಳುತ್ತಾರೆ. ಎಲ್ಲಕ್ಕಿಂತ ಮಜ ನೀಡುವ ವ್ಯಾಖ್ಯಾನ ಅಂದರೆ ವಕೀಲ ಜಗದೀಶ್ ಗೆ ನೀಡಿದ್ದು. ಅವರನ್ನು ಮೋಕ್ಷಿತಾ ಎಂಟರ್​ಟೇನರ್ ಎನ್ನುತ್ತಾರೆ ಮತ್ತು ಮೊದಲ ಮೂರುವಾರ ಅವರ ಎಂಟರ್ಟೇನ್ಮೆಂಟ್ ನಲ್ಲೇ ಕಳೆದುಹೋಯಿತು ಅನ್ನುತ್ತಾರೆ!

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಮುಗಿದುಹೋದ ಅಧ್ಯಾಯ, ಅದರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಅದರಲ್ಲೂ ವಿಶೇಷವಾಗಿ ಟಾಪ್ 5ನಲ್ಲಿದ್ದವರು ಒಬ್ಬೊಬ್ಬರಾಗಿ ಟಿವಿ9ನೊಂದಿಗೆ ಮಾತಾಡುತ್ತಿದ್ದಾರೆ. ಮೋಕ್ಷಿತಾ ಪೈ ಶೋನಲ್ಲಿ 4 ನೇ ಸ್ಥಾನಗಳಿಸಿದ್ದು ಕನ್ನಡಿಗರಿಗೆ ಗೊತ್ತಿದೆ. ತಮ್ಮೊಂದಿಗೆ ಶೋನಲ್ಲಿದ್ದ ಸ್ಪರ್ಧಿಗಳ ಬಗ್ಗೆ ಅವರು ಒಂದೊಂದು ಪದದ ವ್ಯಾಖ್ಯಾನ ನೀಡಿದ್ದಾರೆ. ಎಲ್ಲರಿಗೂ ಒಂದು ಶಬ್ದ ಹುಡುಕುವ ಅವರು ತ್ರಿವಿಕ್ರಮಗೆ ವ್ಯಕ್ತಿತ್ವಕ್ಕೆ ಸಮರ್ಪಕ ವ್ಯಾಖ್ಯಾನ ನೀಡಲ್ಲ, ಎಲ್ಲರ ಜೊತೆ ಹೊಂದಿಕೊಳ್ಳುವ ವ್ಯಕ್ತಿತ್ವದವರು ಅಂತ ಹೇಳುತ್ತಾರಾದರೂ ಖುದ್ದು ಅವರಿಗೆ ಆ ವ್ಯಾಖ್ಯಾನ ಸರಿಯೆನಿಸುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾವ ವೈರಿಗೂ ಬರಬಾರದು ಮೋಕ್ಷಿತಾ ಪೈ ಸ್ಥಿತಿ