Rongali Baishagu Bihu: ಅಸ್ಸಾಮಿನ ಬೊಡೊ ಸಮುದಾಯ ರೊಂಗಾಲಿ ಬೈಸಾಗು ಉತ್ಸವವನ್ನು ಸಂಭ್ರಮದಿಂದ ಆಚರಿಸಿತು

Rongali Baishagu Bihu: ಅಸ್ಸಾಮಿನ ಬೊಡೊ ಸಮುದಾಯ ರೊಂಗಾಲಿ ಬೈಸಾಗು ಉತ್ಸವವನ್ನು ಸಂಭ್ರಮದಿಂದ ಆಚರಿಸಿತು
|

Updated on: Apr 17, 2023 | 6:19 PM

ಬಿಹು ಸುಗ್ಗಿಹಬ್ಬವಾಗಿದ್ದು ಅಸ್ಸಾಂನ ಹೊಸ ವರ್ಷದಾರಂಭವನ್ನು ಸೂಚಿಸುತ್ತದೆ. ಉತ್ಸವವು ವಿವಿಧ ಸಮುದಾಯಗಳ ನಡುವೆ ಸೌಹಾರ್ದತೆ ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಸಹಬಾಳ್ವೆಯನ್ನು ಪ್ರತಿಪಾದಿಸುತ್ತದೆ.

ಅಸ್ಸಾಮಿನ ಬೊಡೊ ಸಮುದಾಯವು ರವಿವಾರದಂದು ರೊಂಗಾಲಿ ಬೈಶಾಗು ಬಿಹು (Rongali Baishagu Bihu) ಉತ್ಸವವನ್ನು ಸಂಭ್ರಮ ಸಡಗರಗಳಿಂದ ಆಚರಿಸಿತು. ರಾಜ್ಯದ ಚಿರಾಂಗ್ ಜಿಲ್ಲೆಯ ದಂಗ್ತೋಲಿ ಹೆಸರಿನ ಗ್ರಾಮದಲ್ಲಿರುವ ಬಾಥೊ ಕ್ಲಬ್ ನಲ್ಲಿ (Batho club) ಉತ್ಸವವನ್ನು ಆಯೋಜಿಸಲಾಗಿತ್ತು. ಎಲ್ಲಾ ವಯೋಮಾನದ ಜನ ಸಾಂಪ್ರದಾಯಿಕ ಉಡುಗೆಗಳನ್ನು (traditional attire) ತೊಟ್ಟು ಸಾಮೂಹಿಕ ಬಿಹು ನೃತ್ಯದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: PM Modi: ಗಿನ್ನಿಸ್ ದಾಖಲೆ ಬರೆದ ಅಸ್ಸಾಂ ಸಾಂಪ್ರದಾಯಿಕ ಬಿಹು ನೃತ್ಯದಲ್ಲಿ ನಮೋ ಭಾಗಿ

‘ನನಗೆ ಬಹಳ ಸಂತೋಷವೆನಿಸುತ್ತಿದೆ. ಗ್ರಾಮದ ಪ್ರತಿಯೊಬ್ಬ ವ್ಯಕ್ತಿ ಉತ್ಸವದಲ್ಲಿ ಭಾಗವಹಿಸಿ ಕುಣಿಯುತ್ತಿದ್ದಾನೆ, ಈ ನೃತ್ಯವನ್ನು ನಾವು ಲಂಗ್ಡಾಗೌಚಾ ಎಂದು ಕರೆಯುತ್ತೇವೆ. ಮಹಿಳೆಯರು, ಪುರುಷರು, ಯುವಕ-ಯುವತಿಯರು-ಎಲ್ಲರೂ ನೃತ್ಯದಲ್ಲಿ ಭಾಗವಹಿಸುತ್ತಾರೆ,’ ಎಂದು ಗ್ರಾಮದ ನಿವಾಸಿ ಲಲಿತಾ ಖಕ್ಲಾರಿ ಹೇಳುತ್ತಾರೆ.

ಬಿಹು ಸುಗ್ಗಿಹಬ್ಬವಾಗಿದ್ದು ಅಸ್ಸಾಂನ ಹೊಸ ವರ್ಷದಾರಂಭವನ್ನು ಸೂಚಿಸುತ್ತದೆ. ಉತ್ಸವವು ವಿವಿಧ ಸಮುದಾಯಗಳ ನಡುವೆ ಸೌಹಾರ್ದತೆ ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಸಹಬಾಳ್ವೆಯನ್ನು ಪ್ರತಿಪಾದಿಸುತ್ತದೆ.

‘ಅಸ್ಸಾಮಿನ ಬಿಹು ಬೊwo ಬುಡಕಟ್ಟು ಜನಾಂಗಕ್ಕೆ ಬೈಸಾಖ್ ಆಗಿದೆ. ಈ ಪರಂಪರೆಯನ್ನು ನಾವು ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ಉತ್ಸವದಂದು ಬೊಡೊ ಸಮುದಾಯದ ಪ್ರತಿಯೊಬ್ಬ ವ್ಯಕ್ತಿ ಹಾಡುತ್ತಾನೆ ಮತ್ತು ಕುಣಿಯುತ್ತಾನೆ. ಎಲ್ಲರೂ ಸೇರಿ ಸಂಭ್ರಮಿಸುವ ಅವಕಾಶವನ್ನು ಈ ಹಬ್ಬ ನೀಡುತ್ತದೆ,’ ಎಂದು ರಾಜ್ಯಸಭಾ ಸದಸ್ಯರಾಗಿರುವ ಎಂಗ್ವಾರ ನರ್ಜರಿ ಹೇಳುತ್ತಾರೆ.

ಇದನ್ನೂ ಓದಿ: BCCI: ರಣಜಿ ಗೆದ್ದವರಿಗೆ 5 ಕೋಟಿ; ದೇಶೀಯ ಪಂದ್ಯಾವಳಿಗಳ ಬಹುಮಾನದ ಗಾತ್ರ ಹೆಚ್ಚಿಸಿದ ಬಿಸಿಸಿಐ..!

ಬಿಹು ಹಬ್ಬದಂದು ಉತ್ತಮ ಫಸಲು ನೀಡಿದ್ದಕ್ಕೆ ಅಸ್ಸಾಮಿನ ಜನ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ ಮತ್ತು ಹೊಸ ವರ್ಷದಲ್ಲಿ ಎಲ್ಲ ಸಂಕಷ್ಟಗಳಿಂದ ಪಾರು ಮಾಡುವಂತೆ ಮೊರೆಯಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?