ಯಾದಗಿರಿ: ಕೊವಿಡ್​ನಿಂದ ಮೃತಪಟ್ಟ ವ್ಯಕ್ತಿಯ ನಂಬರ್​ಗೆ ಬೂಸ್ಟರ್ ಡೋಸ್ ನೀಡಿದ ಮೆಸೇಜ್; ಬೆಳಕಿಗೆ ಬಂದ ಆರೋಗ್ಯ ಇಲಾಖೆಯ ಯಡವಟ್ಟು

| Updated By: shivaprasad.hs

Updated on: May 11, 2022 | 11:28 AM

Yadagiri | Vaccination Certificate: ಕೊರೊನಾ ಲಸಿಕೆ ಯನ್ನು ನೀಡುವ ಟಾರ್ಗೆಟ್ ಪೂರ್ಣಗೊಳಿಸಲು ಸತ್ತವರ ಹೆಸರಿನಲ್ಲಿ ಲಸಿಕೆ ನೀಡಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಈ ಕುರಿತ ಪ್ರಕರಣ ಬೆಳಕಿಗೆ ಬಂದಿದೆ.

ಯಾದಗಿರಿ: ಕೊರೊನಾ ಲಸಿಕೆ (Covid Vaccination) ಯನ್ನು ನೀಡುವ ಟಾರ್ಗೆಟ್ ಪೂರ್ಣಗೊಳಿಸಲು ಸತ್ತವರ ಹೆಸರಿನಲ್ಲಿ ಲಸಿಕೆ ನೀಡಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ. ಯಾದಗಿರಿ ಜಿಲ್ಲೆಯಲ್ಲಿ ಈ ಕುರಿತ ಪ್ರಕರಣ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮುರಾರಿ ರಾವ್ ಶಿಂಧೆ ಕಳೆದ ವರ್ಷ ಕೊವಿಡ್​ನಿಂದ ಮೃತಪಟ್ಟಿದ್ದರು. ಅವರು ನಿಧನರಾಗಿ 3 ತಿಂಗಳ ಬಳಿಕ 2 ನೇ ಡೋಸ್ ನೀಡಿರುವ ಬಗ್ಗೆ ಮೆಸೇಜ್ ಬಂದಿತ್ತು. ಈಗ ಆರೋಗ್ಯ ಇಲಾಖೆ ಮತ್ತೆ ಎಡವಟ್ಟು ಮಾಡಿದೆ. ಕೊವಿಶೀಲ್ಡ್ ಮುಂಜಾಗೃತ ಡೋಸ್ ಪಡೆದ ಬಗ್ಗೆ ಮುರಾರಿ ರಾವ್ ಅವರ ನಂಬರ್​ಗೆ ಮೆಸೇಜ್ ಬಂದಿದೆ. ಈ ಬಗ್ಗೆ ಸಾಕ್ಷಿ ಸಮೇತ ಮಾಹಿತಿ ನೀಡಿರುವ ಮುರಾರಿ ಅವರ ಪುತ್ರ ವಿಶಾಲ್, ಟಾರ್ಗೆಟ್ ರೀಚ್ ಹೆಸರಿನಲ್ಲಿ ಆರೋಗ್ಯ ಇಲಾಖೆಯ ಎಡವಟ್ಟನ್ನು ಹೊರಹಾಕಿದ್ದಾರೆ. ‘‘ಆರೋಗ್ಯ ಇಲಾಖೆ ಪ್ರಕಾರ ನಮ್ಮ ತಂದೆ ಬದುಕಿದ್ದರೆ ಸತ್ತ ನಮ್ಮ ತಂದೆಯನ್ನು ನನ್ನ ಮುಂದೆ ಕರೆದುಕೊಂಡು ಬಂದು ನಿಲ್ಲಿಸಿ’’ ಎಂದು ವಿಶಾಲ್ ನೋವಿನಿಂದ ನುಡಿದಿದ್ದಾರೆ. ಇಲಾಖೆಯು ಪದೇ ಪದೇ ತಪ್ಪೆಸಗಿ ಕುಟುಂಬಸ್ಥರಿಗೆ ನೋವು ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ