Covovax Vaccine: ಖಾಸಗಿ ಕೇಂದ್ರಗಳಲ್ಲಿ 12ರಿಂದ 17 ವರ್ಷದವರಿಗೆ ಕೊವೊವ್ಯಾಕ್ಸ್​ ಲಸಿಕೆ ಲಭ್ಯ

12-17 ವರ್ಷ ವಯಸ್ಸಿನವರು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಕೊವೋವ್ಯಾಕ್ಸ್​ ಲಸಿಕೆಯನ್ನು ಆಯ್ಕೆ ಮಾಡಬಹುದು. CoWIN ಪೋರ್ಟಲ್‌ನಲ್ಲಿ ಈ ಲಸಿಕೆಗೆ ನೋಂದಾಯಿಸಿಕೊಳ್ಳಬಹುದು.

Covovax Vaccine: ಖಾಸಗಿ ಕೇಂದ್ರಗಳಲ್ಲಿ 12ರಿಂದ 17 ವರ್ಷದವರಿಗೆ ಕೊವೊವ್ಯಾಕ್ಸ್​ ಲಸಿಕೆ ಲಭ್ಯ
ಕೊವಿಡ್ ಲಸಿಕೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 02, 2022 | 9:36 PM

ನವದೆಹಲಿ: ಭಾರತದ 12ರಿಂದ 17 ವರ್ಷ ವಯಸ್ಸಿನ ಮಕ್ಕಳು ಈಗ ಸೆರಂ ಇನ್‌ಸ್ಟಿಟ್ಯೂಟ್‌ನ (Serum Institute of India) ಕೊವೊವ್ಯಾಕ್ಸ್​ (Covovax) ಕೊರೊನಾವೈರಸ್ ಲಸಿಕೆಯನ್ನು ಖಾಸಗಿ ಸೆಂಟರ್​ಗಳಲ್ಲಿ ಪಡೆಯಬಹುದು. ಸರ್ಕಾರದ CoWIN ಪೋರ್ಟಲ್‌ನಲ್ಲಿ ಈ ಲಸಿಕೆಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೊವೊವ್ಯಾಕ್ಸ್‌ನ 1 ಡೋಸ್‌ಗೆ 900 ರೂ. ಮತ್ತು ಜಿಎಸ್‌ಟಿಯನ್ನು ನಿಗದಿಪಡಿಸಲಾಗಿದೆ. ಹಾಗೇ, 150 ರೂ. ಆಸ್ಪತ್ರೆಯ ಸೇವಾ ಶುಲ್ಕವನ್ನು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ.

ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದು, 12ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಅಭಿಯಾನದಲ್ಲಿ ಕೋವೊವಾಕ್ಸ್ ಅನ್ನು ಸೇರಿಸಲು ವಿನಂತಿಸಿದ್ದರು. ಪುಣೆ ಮೂಲದ ಸಂಸ್ಥೆಯು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್​ಗೆ 900 ರೂ. ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಸೇರಿಸಿ ಕೋವೊವ್ಯಾಕ್ಸ್ ಅನ್ನು ಒದಗಿಸಲಿದೆ.

12-17 ವರ್ಷ ವಯಸ್ಸಿನವರು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಕೊವೋವ್ಯಾಕ್ಸ್​ ಲಸಿಕೆಯನ್ನು ಆಯ್ಕೆ ಮಾಡಬಹುದು. ಸೋಮವಾರ ಸಂಜೆ CoWIN ಪೋರ್ಟಲ್‌ನಲ್ಲಿ ಇದಕ್ಕಾಗಿ ನಿಬಂಧನೆಯನ್ನು ಮಾಡಲಾಗಿದೆ ಎಂದು ಅಧಿಕೃತ ಮೂಲವು PTI ಗೆ ತಿಳಿಸಿದೆ.

12ರಿಂದ 17 ವಯೋಮಾನದವರಿಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವೊವ್ಯಾಕ್ಸ್ ಕೊವಿಡ್-19 ಲಸಿಕೆಯನ್ನು ನೀಡಲು ಸರ್ಕಾರಿ ಸಮಿತಿಯಾದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ಎನ್‌ಟಿಜಿಐ) ಏ. 29ರಂದು ಅನುಮತಿ ನೀಡಿತ್ತು. ಭಾರತದ ಔಷಧ ನಿಯಂತ್ರಕ (DCGI) ವಿವಿಧ ವಯೋಮಾನದ ಮಕ್ಕಳಿಗೆ ನಿರ್ಬಂಧಿತ ತುರ್ತು ಬಳಕೆಯ ಅಧಿಕಾರಕ್ಕಾಗಿ (EUA) ಮೂರು COVID-19 ಲಸಿಕೆಗಳನ್ನು ಅನುಮೋದಿಸಿತ್ತು. DCGI 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ZyCov-D ಅನ್ನು ಅನುಮೋದಿಸಿದೆ. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯನ್ನು 6-12 ವರ್ಷಗಳವರೆಗೆ ಮತ್ತು ಬಯೋ ಇ ಕಾರ್ಬ್​ವ್ಯಾಕ್ಸ್​ ಲಸಿಕೆಯನ್ನು 5-12 ವರ್ಷಗಳ ಮಕ್ಕಳಿಗೆ ನೀಡಲು ಅನುಮೋದನೆ ನೀಡಿದೆ.

ಅಮೆರಿಕದ ಲಸಿಕೆ ಕಂಪನಿ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೊವೊವ್ಯಾಕ್ಸ್ ಲಸಿಕೆಯ ಬಳಕೆಗೆ ಭಾರತದಲ್ಲಿ ಅನುಮತಿ ನೀಡಲಾಗಿದೆ. ಈ ಲಸಿಕೆಯ ಬೆಲೆ ಕೋವಿಶೀಲ್ಡ್ (Covishield) ಗಿಂತ ಅಧಿಕವಾಗಲಿದೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್