AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covovax: ಭಾರತದ 12-17 ವರ್ಷದ ಮಕ್ಕಳಿಗೆ ಸೆರಂ ಇನ್​​ಸ್ಟಿಟ್ಯೂಟ್​ನ ಕೋವೊವ್ಯಾಕ್ಸ್​ ಲಸಿಕೆ ನೀಡಲು ಅನುಮತಿ

12ರಿಂದ 17 ವಯೋಮಾನದವರಿಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವೊವ್ಯಾಕ್ಸ್ ಕೊವಿಡ್-19 ಲಸಿಕೆಯನ್ನು ನೀಡಲು ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ಎನ್‌ಟಿಜಿಐ) ಅನುಮತಿ ನೀಡಿದೆ.

Covovax: ಭಾರತದ 12-17 ವರ್ಷದ ಮಕ್ಕಳಿಗೆ ಸೆರಂ ಇನ್​​ಸ್ಟಿಟ್ಯೂಟ್​ನ ಕೋವೊವ್ಯಾಕ್ಸ್​ ಲಸಿಕೆ ನೀಡಲು ಅನುಮತಿ
ಕೊವಿಡ್ ಲಸಿಕೆ
TV9 Web
| Updated By: ಸುಷ್ಮಾ ಚಕ್ರೆ|

Updated on:Apr 29, 2022 | 6:04 PM

Share

ನವದೆಹಲಿ: 6 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ (Covaxin Vaccine) ಲಸಿಕೆ ನೀಡಲು ಅನುಮತಿ ಸಿಕ್ಕಿದ ಬೆನ್ನಲ್ಲೇ 12ರಿಂದ 17 ವಯೋಮಾನದವರಿಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (Serum Institute of India) ಕೋವೊವ್ಯಾಕ್ಸ್ (Covovax)  ಕೊವಿಡ್-19 ಲಸಿಕೆಯನ್ನು ನೀಡಲು ಸರ್ಕಾರಿ ಸಮಿತಿಯಾದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ಎನ್‌ಟಿಜಿಐ) ಅನುಮತಿ ನೀಡಿದೆ. ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ಕೊರೊನಾ ಲಸಿಕೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಮಾಹಿತಿ ನೀಡಿದ್ದು, ಶುಕ್ರವಾರ ಎನ್‌ಟಿಎಜಿಐ ಶಿಫಾರಸಿನ ಆಧಾರದ ಮೇಲೆ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಾಲೆಗಳಲ್ಲಿ “ವಿಶೇಷ ಅಭಿಯಾನ” ದೊಂದಿಗೆ ಎಲ್ಲಾ ಅರ್ಹ ಮಕ್ಕಳಿಗೆ ಲಸಿಕೆಯನ್ನು ಸರ್ಕಾರಕ್ಕೆ ಆದ್ಯತೆಯಾಗಿರುತ್ತದೆ ಎಂದು ಒತ್ತಿ ಹೇಳಿದ ಬೆನ್ನಲ್ಲೇ 12ರಿಂದ 17 ವರ್ಷದ ಮಕ್ಕಳಿಗೆ ಕೊವೊವ್ಯಾಕ್ಸ್​ ಲಸಿಕೆ ನೀಡಲು ಅನುಮೋದನೆ ಸಿಕ್ಕಿದೆ.

ಕೊವಿಡ್ -19 ಕುರಿತ ಹೆಚ್ಚಿನ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ..

ಭಾರತದ ಔಷಧ ನಿಯಂತ್ರಕ (DCGI) ವಿವಿಧ ವಯೋಮಾನದ ಮಕ್ಕಳಿಗೆ ನಿರ್ಬಂಧಿತ ತುರ್ತು ಬಳಕೆಯ ಅಧಿಕಾರಕ್ಕಾಗಿ (EUA) ಮೂರು COVID-19 ಲಸಿಕೆಗಳನ್ನು ಮಂಗಳವಾರ ಅನುಮೋದಿಸಿದೆ. DCGI 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ZyCov-D ಅನ್ನು ಅನುಮೋದಿಸಿದೆ. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯನ್ನು 6-12 ವರ್ಷಗಳವರೆಗೆ ಮತ್ತು ಬಯೋ ಇ ಕಾರ್ಬ್​ವ್ಯಾಕ್ಸ್​ ಲಸಿಕೆಯನ್ನು 5-12 ವರ್ಷಗಳ ಮಕ್ಕಳಿಗೆ ನೀಡಲು ಅನುಮೋದನೆ ನೀಡಿದೆ.

ಅಮೆರಿಕದ ಲಸಿಕೆ ಕಂಪನಿ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೊವೊವ್ಯಾಕ್ಸ್ ಲಸಿಕೆಯ ಬಳಕೆಗೆ ಭಾರತದಲ್ಲಿ ಅನುಮತಿ ನೀಡಲಾಗಿದೆ. ಈ ಲಸಿಕೆಯ ಬೆಲೆ ಕೋವಿಶೀಲ್ಡ್ (Covishield) ಗಿಂತ ಅಧಿಕವಾಗಲಿದೆ ಎನ್ನಲಾಗಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಒಟ್ಟು ಸೋಂಕಿತರ ಸಂಖ್ಯೆ 4.3 ಕೋಟಿಗೆ ತಲುಪಿದೆ. ಶುಕ್ರವಾರದ ಆರಂಭದಲ್ಲಿ, ಆರೋಗ್ಯ ಸಚಿವಾಲಯದ ಮಾಹಿತಿಯು ದೇಶದಲ್ಲಿ 3,377 ತಾಜಾ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 60 ಜನ ಸಾವನ್ನಪ್ಪಿದ್ದಾರೆ.

ಇದರ ನಡುವೆ ಎರಡನೇ ಡೋಸ್ ತೆಗೆದುಕೊಂಡು 9 ತಿಂಗಳು ಪೂರ್ಣಗೊಂಡ, 18 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಮೂರನೇ ಡೋಸ್ ತೆಗೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಈ ಎರಡನೇ ಡೋಸ್ ಮತ್ತು ಮೂರನೇ ಡೋಸ್​ ನಡುವಿನ ಸಮಯದ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದಾಗಿ ಪಿಟಿಐ ವರದಿ ಮಾಡಿದೆ. ಈ ಅವಧಿ 9 ತಿಂಗಳು ಇದ್ದಿದ್ದನ್ನು 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Published On - 6:00 pm, Fri, 29 April 22