ಜುಲೈನಲ್ಲಿ ರಾಷ್ಟ್ರಪತಿ ಆಯ್ಕೆ, ರಾಜಕೀಯ ಲೆಕ್ಕಾಚಾರ ಏನಿದೆ? ಯಾವ ಪಕ್ಷದ ಅಭ್ಯರ್ಥಿ ಆಗ್ತಾರೆ ರಾಷ್ಟ್ರಪತಿ ಭವನ ಉತ್ತರಾಧಿಕಾರಿ?

2022 Indian presidential election: ಈ ಹಿನ್ನೆಲೆಯಲ್ಲಿ ಎರಡು ಪ್ರಾದೇಶಿಕ ಪಕ್ಷಗಳ ನೇತಾರರ ಮುಂದಿನ ನಡೆ ಬಹು ಮುಖ್ಯವಾಗಲಿದೆ. ಜಗನ್ ಮೋಹನ್​ ರೆಡ್ಡಿ ಅವರ ವೈ ಎಸ್​ಆರ್​​ ಕಾಂಗ್ರೆಸ್​ ಮತ್ತು ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳದ ನಿರ್ಣಯ ಮಹತ್ವಪೂರ್ಣವೆನಿಸಲಿದೆ. ಇದನ್ನ ಮನಗಂಡು ಇತರೆ ವಿಪಕ್ಷಗಳು ಈ ಎರಡೂ ಪಕ್ಷಗಳನ್ನು ಅದಾಗಲೇ ಸಂಪರ್ಕಿಸಿವೆ.

ಜುಲೈನಲ್ಲಿ ರಾಷ್ಟ್ರಪತಿ ಆಯ್ಕೆ, ರಾಜಕೀಯ ಲೆಕ್ಕಾಚಾರ ಏನಿದೆ? ಯಾವ ಪಕ್ಷದ ಅಭ್ಯರ್ಥಿ ಆಗ್ತಾರೆ ರಾಷ್ಟ್ರಪತಿ ಭವನ ಉತ್ತರಾಧಿಕಾರಿ?
ಜುಲೈನಲ್ಲಿ ರಾಷ್ಟ್ರಪತಿ ಆಯ್ಕೆ, ರಾಜಕೀಯ ಪಕ್ಷಗಳ ಲೆಕ್ಕಾಚಾರ ಏನಿದೆ? ಯಾವ ಪಕ್ಷದ ಅಭ್ಯರ್ಥಿ ಆಗ್ತಾರೆ ರಾಷ್ಟ್ರಪತಿ ಭವನದ ಉತ್ತರಾಧಿಕಾರಿ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 02, 2022 | 10:38 PM

ಭಾರತ ಸದ್ಯದಲ್ಲಿಯೇ ತನ್ನ 17ನೆಯ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕಿದೆ (2022 Indian presidential election). ಹಾಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರ (President Ram Nath Kovind) 5 ವರ್ಷಗಳ ಅಧಿಕಾರಾವಾಧಿ ಜುಲೈ 25ಕ್ಕೆ ಮುಗಿಯಲಿದೆ. ಸದ್ಯಕ್ಕೆ ಯಾರು ಮುಂದಿನ ರಾಷ್ಟ್ರಪತಿ ಅನ್ನುವುದಕ್ಕಿಂತ ಯಾವ ಪಕ್ಷದ ಅಭ್ಯರ್ಥಿ ರಾಷ್ಟ್ರಪತಿ ಭವನದ ಉತ್ತರಾಧಿಕಾರಿ ಆಗ್ತಾರೆ ಎಂಬುದು ರಾಜಕೀಯ ಕುತೂಹಲದ ಸಂಗತಿಯಾಗಿದೆ. ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ವಿಶ್ಲೇಷಿಸುವುದಾದರೆ ರಾಜಕೀಯ ಪಂಡಿತರ ಪ್ರಕಾರ ರಾಮನಾಥ್​ ಕೋವಿಂದ್ ಅವರ ಮರು ಆಯ್ಕೆ ದೂರದ ಮಾತಾಗಿದೆ. ಹಾಗಾಗಿ ಆಡಳಿತಾರೂಢ ಬಿಜೆಪಿ ನಾಯಕತ್ವ ಮತ್ತು ಪ್ರಮುಖ ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಪ್ರತಿಷ್ಠಾಪಿಸಲು ಸತತ ಪ್ರಯತ್ನ ನಡೆಸಿವೆ. ಸಂಖ್ಯಾಬಲ ಗಣನೆಗೆ ತೆಗೆದುಕೊಂಡಾಗ ಆಡಳಿತಾರೂಢ ಬಿಜೆಪಿಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದು ಕಷ್ಟವೇನೂ ಆಗಲಾರದು. ಆದರೆ ವಿಪಕ್ಷಗಳು ಬಿಜೆಪಿಗೆ ಟಾಂಗ್​ ಕೊಡಲು ಶಕ್ತಿಮೀರಿ ಪ್ರಯತ್ನ ಪಡುವುದು ಖಚಿತ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಎರಡು ಪ್ರಾದೇಶಿಕ ಪಕ್ಷಗಳ ನೇತಾರರ ಮುಂದಿನ ನಡೆ ಬಹು ಮುಖ್ಯವಾಗಲಿದೆ. ಜಗನ್ ಮೋಹನ್​ ರೆಡ್ಡಿ ಅವರ ವೈ ಎಸ್​ಆರ್​​ ಕಾಂಗ್ರೆಸ್​ ಮತ್ತು ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳದ ನಿರ್ಣಯ ಮಹತ್ವಪೂರ್ಣವೆನಿಸಲಿದೆ. ಇದನ್ನ ಮನಗಂಡು ಇತರೆ ವಿಪಕ್ಷಗಳು ಈ ಎರಡೂ ಪಕ್ಷಗಳನ್ನು ಅದಾಗಲೇ ಸಂಪರ್ಕಿಸಿವೆ. ಆದರೆ ಈ ಎರಡೂ ಪಕ್ಷಗಳ ಒಲವು ಬಿಜೆಪಿಯತ್ತ ವಾಲಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವೈ ಎಸ್​ಆರ್​​ ಕಾಂಗ್ರೆಸ್​ ಮತ್ತು ಬಿಜು ಜನತಾ ದಳದ ಅಧಿನಾಯಕರು ವಿರೋಧ ಪಕ್ಷಗಳ ಜೊತೆ ಕೈಜೋಡಿಸುವ ಇಚ್ಛೆ ಹೊಂದಿಲ್ಲ. ಅದಕ್ಕಿಂತ ಹೆಚ್ಚಿಗೆ ಆಡಳಿತಾರೂಢ ಬಿಜೆಪಿಗೆ ಠಕ್ಕರ್​ ಕೊಡಲು ಬಯಸಿಲ್ಲ. ವಿರೋಧ ಪಕ್ಷಗಳ ಜೊತೆ ಕೈಜೋಡಿಸುವುದರಿಂದ ತನಗೆ ಬರುವುದಾದರೂ ಏನು ಎಂಬ ಮನೋಭಾವ, ಲೆಕ್ಕಾಚಾರ ಹಾಕಿ ಎರಡೂ ಪಕ್ಷಗಳು ಸೈಲೆಂಟಾಗಿವೆ. ಹಾಗಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ವಿಪಕ್ಷಗಳ ಯಾವುದೇ ಪ್ರಯತ್ನಗಳನ್ನು ಇವೆರಡೂ ಪಕ್ಷಗಳು ಉತ್ತೇಜಿಸುವುದಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್​ ಶಕ್ತಿ ಕ್ಷೀಣವಾಗಿರುವಾಗ ಇತರೆ ವಿಪಕ್ಷಗಳಿಗೆ ಎಲ್ಲಿಂದ ಧೈರ್ಯ ಬರಬೇಕು ಎಂಬ ಮಾತೂ ಸರಿದಾಡುತ್ತಿದೆ. ಕಾಂಗ್ರೆಸ್​ ಸತತವಾಗಿ ಚುನಾವಣೆಗಳನ್ನು ಸೋಲುತ್ತಾ ಬಂದಿದ್ದು, ರಾಷ್ಟ್ರಪತಿ ಅಂತಹ ಮಹತ್ವದ ಸ್ಥಾನಕ್ಕಾಗಿ ಪೈಪೋಟಿ ನಡೆಸುವ ಉಮೇದಿಯೂ ಇಲ್ಲವಾಗಿದೆ ಎನ್ನಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್