ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ

| Updated By: ವಿವೇಕ ಬಿರಾದಾರ

Updated on: Nov 17, 2024 | 9:58 AM

ಎಸ್​ಎಸ್​ಎಲ್​ಸಿಯಲ್ಲಿ ಮೂರು ಬಾರಿ ಫೇಲ್ ಆಗಿದ್ದಕ್ಕೆ ಬಾಲಕ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿರುವ ಘಟನೆ ಬೆಂಗಳೂರಿನ ತಿಪ್ಪಸಂದ್ರದ ಸರ್ಕಲ್​ನಲ್ಲಿ ನಡೆದಿದೆ. ಜೀವನ್ ಭೀಮಾನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಬಾಲಕ ಕೃತ್ಯ ಬೆಳಕಿಗೆ ಬಂದಿದೆ.

ಬೆಂಗಳೂರು, ನವೆಂಬರ್​ 17: ಎಸ್​ಎಸ್​ಎಲ್​ಸಿಯಲ್ಲಿ ಮೂರು ಬಾರಿ ಫೇಲ್ ಆಗಿದ್ದಕ್ಕೆ ಬಾಲಕ ತಿಪ್ಪಸಂದ್ರದ ಸರ್ಕಲ್​ನಲ್ಲಿದ್ದ ಲಕ್ಷ್ಮೀ ಭುವನೇಶ್ವರಿ (Bhuvaneshwari) ವಿಗ್ರಹ ವಿರೂಪಗೊಳಿಸಿದ್ದಾನೆ. ಬಾಲಕ ಗುರುವಾರ ರಾತ್ರಿ ವಿಗ್ರಹ ವಿರೂಪಗೊಳಿಸಿ ಹೋಗಿದ್ದಾನೆ. ಮರುದಿನ ದೇವಸ್ಥಾನಕ್ಕೆ ಬಂದ ಭಕ್ತರು ವಿಗ್ರಹ ವಿರೂಪಗೊಂಡಿದ್ದನ್ನು ಕಂಡು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಜೀವನ್ ಭೀಮಾನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಬಾಲಕ ಕೃತ್ಯ ಬೆಳಕಿಗೆ ಬಂದಿದೆ.

ತಿಪ್ಪಸಂದ್ರದ ನಿವಾಸಿಯಾಗಿರುವ ಅಪ್ರಾಪ್ತ ಬಾಲಕ ದೈವ ಭಕ್ತನಾಗಿದ್ದನು. ಭುವನೇಶ್ವರಿ ದೇವಿಯನ್ನು ನಿತ್ಯವೂ ದೇವಿಯನ್ನು ಪೂಜಿಸುತ್ತಿದ್ದನಂತೆ. ಆದರೆ, ಎಸ್​ಎಸ್​ಎಲ್‌ಸಿಯಲ್ಲಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ವಿಗ್ರಹ ವಿರೂಪಗೊಳಿಸಿದ್ದಾನೆ. ಬಾಲಕ ವಿಗ್ರಹ ವಿರೂಪಗೊಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಬಾಲಕ ಮಧ್ಯರಾತ್ರಿ ಒಬ್ಬನೇ ಓಡಾಡುವುದು, ಒಬ್ಬೊಬ್ಬನೇ ಮಾತಾಡೋದು ಮಾಡುತ್ತಿದ್ದನು. ಜೀವನ್ ಭೀಮಾನಗರ ಪೊಲೀಸರು ಸದ್ಯ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Nov 17, 2024 09:56 AM