Loading video

ವಧು ಮೇಲೆ ಅನುಮಾನಪಟ್ಟು ತಾಳಿಕಟ್ಟುವ ವೇಳೆ ಮದುವೆ ಒಲ್ಲೆ ಎಂದು ಮಂಟಪದಿಂದ ಹೊರನಡೆದ ವರ

Updated By: Digi Tech Desk

Updated on: Apr 30, 2025 | 2:58 PM

ಹಾಗೆ ನೋಡಿದರೆ ಒಂದರ್ಥದಲ್ಲಿ ಮದುವೆ ರದ್ದಾಗಿದ್ದೇ ಒಳ್ಳೆದಾಯಿತು ಅಂತ ಅನಿಸದಿರದು. ಮದುವೆಯಾದ ಮೇಲೆ ಅವನು ತನಗಿದ್ದ ಅನುಮಾನದ ಹಿನ್ನೆಲೆಯಲ್ಲಿ ಹೆಂಡತಿಯ ಮೇಲೆ ಇಲ್ಲಸಲ್ಲದ ಅರೋಪಗಳನ್ನು ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲಾರಂಭಸಿದ್ದರೆ ಅವನ್ನು ಕಟ್ಟಿಕೊಂಡವಳ ಬಾಳು ನರಕಸದೃಶವಾಗುತಿತ್ತು. ಮದುವೆ ರದ್ದಾಗಿದ್ದು ಯುವತಿಯ ಭವಿಷ್ಯದ ಮೇಲೆ ಕರಿನೆರಳು ಬೀರೋರಿದಂತೂ ಸತ್ಯ.

ದೇವನಹಳ್ಳಿ, ಏಪ್ರಿಲ್ 30: ಇಂಥ ಘಟನೆಗಳು ಅತ್ಯಂತ ವಿರಳ, ಆದರೆ ಅಲ್ಲಲ್ಲಿ ನಡೆದಿದ್ದನ್ನು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಾಗ ಜನ ಹೀಗೂ ಆಗೋದುಂಟೇ ಅನ್ನೋದುಂಟು ಮಾರಾಯ್ರೇ. ದೇವನಹಳ್ಳಿಯ ಬಾಲೇಪುರ ಕಲ್ಯಾಣ ಮಂಟಪದಲ್ಲಿ (Devanahalli Balepura Kalyana Mantap) ಇಂದು ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವರಮಹಾಶಯ ತಾಳಿಕಟ್ಟುವ ಸಂದರ್ಭದಲ್ಲಿ ನನಗೆ ಮದುವೆ ಬೇಡ ಅಂತ ಎದ್ದು ಮಂಟಪದಿಂದ ಹೊರನಡೆದಿದ್ದಾನೆ. ನಿನ್ನೆ ಸಾಯಂಕಾಲ ರಿಸೆಪ್ಷನ್ ನಡೆದಿದೆ, ಅದರಲ್ಲಿ ಎಲ್ಲರೊಂದಿಗೆ ನಗುನಗುತ್ತಾ, ಭಾವೀ ಪತ್ನಿಯೊಂದಿಗೆ ಜೋಕ್ ಮಾಡಿಕೊಂಡಿದ್ದ ಮದುವೆ ಗಂಡಿಗೆ ಇವತ್ತು ಮುಹೂರ್ತದ ಸಮಯದಲ್ಲಿ ಯುವತಿಯ ಮೇಲೆ ಅನುಮಾನ ಶುರುವಾಗಿದೆಯಂತೆ.

ಇದನ್ನೂ ಓದಿ:  ತಾಳಿ ಕಟ್ಟುವ ಶುಭ ಘಳಿಗೆ… ವರ ಮಹಾಶಯ ಮದುವೆ ಮಂಟಪದಿಂದ ಲಾಂಗ್ ಜಂಪ್​! ಆಮೇಲೆ ಏನಾಯ್ತು?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 30, 2025 12:05 PM