ಮನುಷ್ಯ ಹುಟ್ಟಿದಾಗ ಉಸಿರಿರುತ್ತೆ ಹೆಸರಿರಲ್ಲ ಅದರೆ ಸತ್ತಾಗ ಉಸಿರಿರಲ್ಲ ಹೆಸರಿರುತ್ತೆ: ಬಿಎಸ್ ಯಡಿಯೂರಪ್ಪ

|

Updated on: May 11, 2024 | 4:38 PM

ಡಾ ಬಿಅರ್ ಅಂಬೇಡ್ಕರ್ ಅವರು ಹೇಳಿರುವ ಪ್ರಕಾರ ಸಮಾಜದ ಸೇವೆ ಮಾಡಲಿಚ್ಛಿಸುವ ವ್ಯಕ್ತಿ ಮಾತ್ರ ಮಹಾನ್ ಅನಿಸಿಕೊಳ್ಳುತ್ತಾನೆ, ಪ್ರಭಾವಿ ಮತ್ತು ಸ್ವಾಭಿಮಾನಿ ವ್ಯಕ್ತಿಯಾಗಿದ್ದ ಪ್ರಸಾದ್ ನಮ್ಮ ನಡುವಿನ ಒಬ್ಬ ಶ್ರೇಷ್ಠ ರಾಜಕಾರಣಿಯಾಗಿದ್ದರು ಎಂದು ಯಡಿಯೂರಪ್ಪ ಹೇಳಿದರು.

ಮೈಸೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಡುವಿನ ಸೈದ್ಧಾಂತಿಕ ನಿಲುವು ಮತ್ತು ವಿಚಾರಧಾರೆಗಳು ಭಿನ್ನವಾಗಿದ್ದು ರಾಜಕಾರಣದಲ್ಲಿ ಕಟ್ಟಾ ಎದುರಾಳಿಗಳಾಗಿದ್ದರೂ ಪರಸ್ಪರ ಸ್ನೇಹ-ವಿಶ್ವಾಸಗಳಿಗೆ ಬರವಿಲ್ಲ. ಇವತ್ತು ಮೈಸೂರಿನ ಡಾ ಬಿ ಅರ್ ಅಂಬೇಡ್ಕರ್ ಪ್ರತಿಷ್ಠಾನದಲ್ಲಿ ಅಯೋಜಿಸಲಾಗಿದ್ದ ವಿ ಶ್ರೀನಿವಾಸ ಪ್ರಸಾದ್ (V Srinivas Prasad) ಅವರ ನುಡಿನಮನ ಕಾರ್ಯಕ್ರಮದಲ್ಲಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಯಡಿಯೂರಪ್ಪನವರು ಸಿದ್ದರಾಮಯ್ಯರನ್ನು ಜನಪ್ರಿಯ ಮುಖ್ಯಮಂತ್ರಿ ಎಂದು ಸಂಬೋಧಿಸುತ್ತಾರೆ. ತಮ್ಮ ಮಾತಿನಲ್ಲಿ ಯಡಿಯೂರಪ್ಪ ಪ್ರಸಾದ್ ಅವರ ಬಗ್ಗೆ ಬಹಳ ಅರ್ಥಗರ್ಭಿತವಾದ ಅಂಶ ಹೇಳುತ್ತಾರೆ. ಮನುಷ್ಯ ಹುಟ್ಟಿದಾಗ ಉಸಿರಿರುತ್ತೆ ಹೆಸರಿರಲ್ಲ ಅದರೆ ಸತ್ತಾಗ ಉಸಿರಿರಲ್ಲ ಹೆಸರಿರುತ್ತೆ, ಅಗಲಿದ ನಾಯಕ ಪ್ರಸಾದ್ ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ತಮ್ಮ ಸೈದ್ಧಾಂತಿಕ ನಿಷ್ಠೆ ಮತ್ತು ಸಾಧನೆಗಳಿಂದ ತಮ್ಮ ಹೆಸರನ್ನು ಬಿಟ್ಟು ಹೋಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಡಾ ಬಿಅರ್ ಅಂಬೇಡ್ಕರ್ ಅವರು ಹೇಳಿರುವ ಪ್ರಕಾರ ಸಮಾಜದ ಸೇವೆ ಮಾಡಲಿಚ್ಛಿಸುವ ವ್ಯಕ್ತಿ ಮಾತ್ರ ಮಹಾನ್ ಅನಿಸಿಕೊಳ್ಳುತ್ತಾನೆ, ಪ್ರಭಾವಿ ಮತ್ತು ಸ್ವಾಭಿಮಾನಿ ವ್ಯಕ್ತಿಯಾಗಿದ್ದ ಪ್ರಸಾದ್ ನಮ್ಮ ನಡುವಿನ ಒಬ್ಬ ಶ್ರೇಷ್ಠ ರಾಜಕಾರಣಿಯಾಗಿದ್ದರು ಎಂದು ಯಡಿಯೂರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶಿವಕುಮಾರ್ ಒಬ್ಬ ತಲೆತಿರುಕ, ಕ್ಷುಲ್ಲಕ ಕಾರಣಗಳಿಂದ ಮುಸ್ಲಿಮರ ಮನವೊಲಿಸುವ ಪ್ರಯತ್ನ ಮಾಡುತ್ತಾನೆ: ಬಿಎಸ್ ಯಡಿಯೂರಪ್ಪ