ಬಿಎಸ್ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ: ಇದರ ವಿಶೇಷತೆಯೇನು?
ನಾಳೆ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರಿಗೆ ಅದೃಷ್ಟ ತಂದ ಅಂಬಾಸಿಡರ್ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬಿಎಸ್ವೈ ರಾಜಕೀಯ ಪ್ರಯಾಣದಲ್ಲಿ ಈ ಕಾರು ಪ್ರಮುಖ ಪಾತ್ರ ವಹಿಸಿದ್ದು, ನಗರ ಕೇಂದ್ರೀಕೃತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ಕೊಂಡೊಯ್ದು ಸಂಘಟನೆ ಬಲಪಡಿಸುವಲ್ಲಿ ಈ ವಾಹನ ನೆರವಾಗಿದೆ. ರಸ್ತೆಗಳು ದುಸ್ಥಿತಿಯಲ್ಲಿದ್ದ ದಿನಗಳಲ್ಲಿ, ಯಡಿಯೂರಪ್ಪ, ಅನಂತ್ ಕುಮಾರ್, ಶಂಕರ್ ಮೂರ್ತಿಗಳಂತಹ ನಾಯಕರು ರಾಜ್ಯಾದ್ಯಂತ ಇದೇ ಕಾರಿನಲ್ಲಿ ಸಂಚರಿಸಿದ್ದರು ಎನ್ನಲಾಗಿದೆ.
ಚಿತ್ರದುರ್ಗ, ಮೇ 08: ನಗರದಲ್ಲಿ ನಾಳೆ (ಮೇ 09) ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರರು ಬಳಸಿದ ಅಂಬಾಸಿಡರ್ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬಿಜೆಪಿ ಮುಖಂಡರು, ಯಡಿಯೂರಪ್ಪ ಅಭಿಮಾನಿಗಳು ಕಾರಿನ ವೀಕ್ಷಣೆ ಮಾಡಿದ್ದಲ್ಲದೆ ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ತಂದೆ ಬಳಸಿದ್ದ ಕಾರಿನ ಬಗ್ಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಯಡಿಯೂರಪ್ಪರನ್ನು ಗುರುತಿಸುವಷ್ಟೇ ಈ ಕಾರನ್ನೂ ಜನ ಗುರುತಿಸುತ್ತಾರೆ. ಅಂದು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸಲು ಯಡಿಯೂರಪ್ಪನವರಿಗೆ ಈ ಕಾರು ನೆರವಾಗಿದೆ. ಬಿಎಸ್ವೈ ಸೇರಿ ಪಕ್ಷದ ಅನೇಕ ಪ್ರಮುಖರು ಇದೇ ಕಾರಲ್ಲಿ ತೆರಳಿ ಪಕ್ಷದ ಪ್ರಚಾರ ಮಾಡಿದ್ದರು ಎಂದು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
