ಬುಲೆಟ್​ ಪ್ರಕಾಶ್​ ಪುತ್ರ ನಟಿಸಿದ ಮೊದಲ ಸಿನಿಮಾ ರಿಲೀಸ್​; ಇಲ್ಲಿದೆ ರಕ್ಷಕ್​ ಪ್ರತಿಕ್ರಿಯೆ

Bullet Prakssh | Rakshak: ಮೊದಲ ಸಿನಿಮಾಗೆ ಜನರು ತೋರಿಸುತ್ತಿರುವ ಪ್ರೀತಿ ಕಂಡು ರಕ್ಷಕ್​ ಖುಷಿ ಆಗಿದ್ದಾರೆ. ಈ ವೇಳೆ ಅವರು ತಂದೆಯನ್ನು ಸ್ಮರಿಸಿಕೊಂಡಿದ್ದಾರೆ.

TV9kannada Web Team

| Edited By: Madan Kumar

Sep 23, 2022 | 4:48 PM

ಜಡೇಶ್​ ಕೆ. ಹಂಪಿ ನಿರ್ದೇಶನದ ‘ಗುರು ಶಿಷ್ಯರು’ (Guru Shishyaru) ಸಿನಿಮಾ ಇಂದು (ಸೆ.23) ಬಿಡುಗಡೆ ಆಗಿದೆ. ಶರಣ್ ಮತ್ತು ನಿಶ್ವಿಕಾ ನಾಯ್ಡು ನಟನೆಯ ಈ ಚಿತ್ರದಲ್ಲಿ ಬುಲೆಟ್​ ಪ್ರಕಾಶ್​ (Bullet Prakssh) ಪುತ್ರ ರಕ್ಷಕ್​ ಕೂಡ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ಬೆಂಗಳೂರಿನ ನರ್ತಕಿ ಥಿಯೇಟರ್​ನಲ್ಲಿ ಚಿತ್ರ ನೋಡಲು ಬಂದ ಅವರು ಟಿವಿ9 ಜತೆ ಮಾತನಾಡಿದ್ದಾರೆ. ಮೊದಲ ಸಿನಿಮಾಗೆ ಜನರು ತೋರಿಸುತ್ತಿರುವ ಪ್ರೀತಿ ಕಂಡು ರಕ್ಷಕ್​ (Rakshak) ಖುಷಿ ಆಗಿದ್ದಾರೆ. ಈ ವೇಳೆ ಅವರು ತಂದೆಯನ್ನು ಸ್ಮರಿಸಿಕೊಂಡಿದ್ದಾರೆ.

Follow us on

Click on your DTH Provider to Add TV9 Kannada