ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಭಾರಿ ಬಹುಮತದೊಂದಿಗೆ ಗೆಲ್ಲಲಿದ್ದಾರೆ: ಬಿಎಸ್ ಯಡಿಯೂರಪ್ಪ
ಸಿದ್ದರಾಮಯ್ಯ 20 ಸ್ಥಾನ ಗೆಲ್ಲುತ್ತೇವೆ ಅಂತ ಹೇಳಿರುವುದನ್ನು ಗೇಲಿ ಮಾಡಿದ ಯಡಿಯೂರಪ್ಪ, ಕಾಂಗ್ರೆಸ್ ಗೆಲ್ಲುವ 4-5 ಕ್ಷೇತ್ರಗಳ ಹೆಸರು ಮತ್ತು ಕಾಂಗ್ರೆಸ್ ಗೆದ್ದರೆ ಪ್ರಧಾನಿ ಯಾರಾಗಲಿದ್ದಾರೆ ಅಂತ ಹೇಳಲಿ ನೋಡೋಣ ಎಂದರು. ಈಶ್ವರಪ್ಪ ತಮ್ಮ ನಾಮಪತ್ರ ವಾಪಸ್ಸು ಪಡೆಯದಿರುವ ಬಗ್ಗೆ ಅವರ ಗಮನ ಸೆಳೆದಾಗ, ಅದರ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿ ಎಂದರು.
ಶಿವಮೊಗ್ಗ: ಸಂಸದನಾಗಿ ಬಿವೈ ರಾಘವೇಂದ್ರ (BY Raghavendra) ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರ ಕೈ ಹಿಡಿಯಲಿವೆ, ಶೇಕಡಾ 95ರಷ್ಟು ಕೆಲಸಗಳನ್ನು ಅವರು ಮಾಡಿದ್ದಾರೆ, ಉಳಿದ ಕೆಲಸಗಳನ್ನ ಪುನಃ ಆರಿಸಿ ಬಂದ ಮೇಲೆ ಮಾಡಲಿದ್ದಾರೆ, ಅವರು 2-3 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯದೆಲ್ಲೆಡೆ ಮೋದಿ ಅಲೆ (Modi wave) ಇದೆ, ಹಾಗಾಗಿ ಎಲ್ಲ 28 ಸ್ಥಾನಗಳನ್ನು ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮೂರು ಬಾರಿ ಬಂದು ಹೋಗಿದ್ದಾರೆ ಮತ್ತು ಮುಂದೆ ಅಮಿತ್ ಶಾ ಕೂಡ ಬರುವವರಿದ್ದಾರೆ ಎಂದರು. ಸಿದ್ದರಾಮಯ್ಯ 20 ಸ್ಥಾನ ಗೆಲ್ಲುತ್ತೇವೆ ಅಂತ ಹೇಳಿರುವುದನ್ನು ಗೇಲಿ ಮಾಡಿದ ಯಡಿಯೂರಪ್ಪ, ಕಾಂಗ್ರೆಸ್ ಗೆಲ್ಲುವ 4-5 ಕ್ಷೇತ್ರಗಳ ಹೆಸರು ಮತ್ತು ಕಾಂಗ್ರೆಸ್ ಗೆದ್ದರೆ ಪ್ರಧಾನಿ ಯಾರಾಗಲಿದ್ದಾರೆ ಅಂತ ಹೇಳಲಿ ನೋಡೋಣ ಎಂದರು. ಈಶ್ವರಪ್ಪ ತಮ್ಮ ನಾಮಪತ್ರ ವಾಪಸ್ಸು ಪಡೆಯದಿರುವ ಬಗ್ಗೆ ಅವರ ಗಮನ ಸೆಳೆದಾಗ, ಅದರ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿ ಎಂದರು. ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಒಪ್ಪಿಸಿರುವುದನ್ನು ಯಡಿಯೂರಪ್ಪ ಸ್ವಾಗತಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಕಾಣಲಿದ್ದಾರೆ: ಬಿಎಸ್ ಯಡಿಯೂರಪ್ಪ