ತಮಿಳುನಾಡು ನಂತರ ಬೆಂಗಳೂರಿಗೆ ಕೆ ಅಣ್ಣಾಮಲೈ ಲಗ್ಗೆ, ಪಿಸಿ ಮೋಹನ್ ಪರ ಮತಯಾಚನೆ!
ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ನೀಡಿ ಚುನಾವಣೆ ಗೆದ್ದಿರಬಹುದು, ಅದರೆ ಈ ಬಾರಿ ಅದರಲ್ಲೂ ವಿಶೇಷವಾಗಿ ಬೆಂಗಳೂರಲ್ಲಿ ಗಾಳಿ ಬದಲಾಗಿದೆ ಎಂದು ಅಣ್ಣಾಮಲೈ ಹೇಳಿದರು. ಕಾಂಗ್ರೆಸ್ ನವರು ಚೊಂಬಿನ ಪೋಸ್ಟರ್ ಗಳೊಂದಿಗೆ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಜನ ಅದನ್ನು ತಮಾಷೆಯಾಗಿ ನೋಡುತ್ತಿದ್ದಾರೆ ಎಂದರು.
ಬೆಂಗಳೂರು: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ರಾಜ್ಯಕ್ಕೆ ಅಪರಿಚಿತರೇನೂ ಅಲ್ಲ, ರಾಜಕಾರಣಕ್ಕೆ ಧುಮುಕುವ ಮೊದಲು ಅವರು ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತಮಿಳುನಾಡುನಲ್ಲಿ ಲೋಕಸಭಾ ಚುನಾವಣೆ (Lok Sabha polls in Tamil Nadu) ಮುಗಿದಿದೆ ಮತ್ತು ಅಲ್ಲಿ ಭರ್ಜರಿಯಾಗಿ ಕ್ಯಾಂಪೇನಿಂಗ್ ಮಾಡಿದ ಬಳಿಕ ಅವರು ಕರ್ನಾಟಕಕ್ಕೆ ಬಂದಿದ್ದು ಇವತ್ತು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಪಿಸಿ ಮೋಹನ್ (PC Mohan) ಪರ ಮತ ಯಾಚಿಸಿದರು. ಟಿವಿ9 ವರದಿಗಾರ ಅವರನ್ನು ಪ್ರಚಾರ ವಾಹನದಲ್ಲೇ ಮಾತಾಡಿಸಿದಾಗ ಕಳೆದ ಬಾರಿ 25 ಸ್ಥಾನ ಗೆದ್ದಿದ್ದ ಬಿಜೆಪಿ ಎಲ್ಲ 28 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದರು. ತಾನು ನೋಡುತ್ತಿರುವ ಹಾಗೆ ರಾಜ್ಯದ ಎಲ್ಲ ಕಡೆ ಬಿಜೆಪಿ ಪರ ಒಳ್ಳೆ ಟ್ರೆಂಡ್ ಕಾಣುತ್ತಿದೆ ಎಂದು ಹೇಳಿದ ಅವರು, ತಮಿಳುನಾಡುನಲ್ಲೂ ಪಕ್ಷಕ್ಕೆ ಉತ್ತಮ ಬೆಂಬಲ ಸಿಕ್ಕಿದೆ ಮತ್ತು ಎನ್ ಡಿಎ ಕೂಟಕ್ಕೆ ಡಬಲ್ ಡಿಜಿಟ್ ನಲ್ಲಿ ಸೀಟುಗಳು ಸಿಕ್ಕಲಿವೆ ಎಂದು ಹೇಳಿದರು.
ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ನೀಡಿ ಚುನಾವಣೆ ಗೆದ್ದಿರಬಹುದು, ಅದರೆ ಈ ಬಾರಿ ಅದರಲ್ಲೂ ವಿಶೇಷವಾಗಿ ಬೆಂಗಳೂರಲ್ಲಿ ಗಾಳಿ ಬದಲಾಗಿದೆ ಎಂದು ಅಣ್ಣಾಮಲೈ ಹೇಳಿದರು. ಕಾಂಗ್ರೆಸ್ ನವರು ಚೊಂಬಿನ ಪೋಸ್ಟರ್ ಗಳೊಂದಿಗೆ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಜನ ಅದನ್ನು ತಮಾಷೆಯಾಗಿ ನೋಡುತ್ತಿದ್ದಾರೆ, ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನು ಗಂಬೀರವಾಗಿ ತೆಗೆದುಕೊಂಡಂತಿಲ್ಲ, ಚೊಂಬಿನಂಥ ಆಬ್ಜೆಕ್ಟ್ ಗಳನ್ನು ಒಮ್ಮೆ ಉಪಯೋಗಿಸಿದರೆ ಅಥವಾ ಮೀಮ್ ಆಗಿ ಬಳಸಿದರೆ ಜನರಿಗೆ ಇಷ್ಟವಾದೀತು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: K Annamalai: ಐಷಾರಾಮಿ ರಾಫೆಲ್ ವಾಚ್ ಧರಿಸಿರುವುದಕ್ಕೆ ತಮಿಳುನಾಡು ಬಿಜೆಪಿ ಸಾರಥಿ ಕೆ ಅಣ್ಣಾಮಲೈ ಕೊಟ್ಟ ಉತ್ತರವೇನು?