ದಿಲ್ಲಿಯಲ್ಲಿ ವಿಜಯೇಂದ್ರ, ರಾಧಾಮೋಹನ್ ದಾಸ್ ,ಜೋಶಿ ಜಂಟಿ ಸುದ್ದಿಗೋಷ್ಟಿ ನೇರಪ್ರಸಾರ

|

Updated on: Aug 01, 2024 | 4:47 PM

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹೋರಾಟಕ್ಕೆ ವಿಪಕ್ಷಗಳಿಗೆ ಸಿಕ್ಕಿದ್ದ ಅಸ್ತ್ರ ಈಗ ಕವಲುದಾರಿಯಲ್ಲಿ ನಿಂತಿದೆ. ಉದ್ದೇಶಿತ ಮೈಸೂರು ಚಲೋ ಅನಿಶ್ಚಿತತೆಗೆ ಜಾರಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆ ರಾಜ್ಯದ ಬಿಜೆಪಿ ನಾಯಕರ ಹುಬ್ಬೇರಿಸಿದೆ. ಪಾದಯಾತ್ರೆಗೆ ಎನ್ ಡಿಎ ಮಿತ್ರ ಪಕ್ಷ  ಜೆಡಿಎಸ್ ಬೆಂಬಲ ನಿರಾಕರಿಸಲ್ಪಟ್ಟಿದ್ದರಿಂದ ಕೂಡಲೇ ಪ್ರಮುಖ ಬಿಜೆಪಿ ನಾಯಕರು ಕುಮಾರಸ್ವಾಮಿ ಜತೆ ಮಹತ್ವದ ಚರ್ಚೆ ಮಾಡಿದ್ದು, ಇದೀಗ ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ರಾಧಾಮೋಹನ್ ದಾಸ್ ಜಂಟಿ ಸುದ್ದಿಗೋಷ್ಟಿ ನಡೆಸಿದ್ದು, ಅದರ ನೇರಪ್ರಸಾರ ಇಲ್ಲಿದೆ ನೋಡಿ.

ನವದೆಹಲಿ, (ಆಗಸ್ಟ್ 01): ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾರಣಕ್ಕಾಗಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಬೇಕಿದ್ದ ಮುಡಾ ಸೈಟ್ ಕುರಿತಾದ ಮೈಸೂರು ಚಲೋ ರದ್ದಾಗಬಹುದಾದ ಸನ್ನಿವೇಶ ಸೃಷ್ಟಿಯಾಗಿದೆ. ಪಾದಯಾತ್ರೆಯ ಸಿದ್ಧತೆಯಲ್ಲಿ, ಸಭೆಗಳಲ್ಲಿ, ನಿರ್ಧಾರಗಳಲ್ಲಿ ಹಾಸನ ಮಾಜಿ ಶಾಸಕರೂ ಆಗಿರುವ ಪ್ರೀತಂ ಗೌಡ ಮುಂಚೂಣಿಯಲ್ಲಿರುವುದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಬಿಜೆಪಿ ಪಾದಯಾತ್ರೆಗೆ ಬೆಂಬಲ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಬಿಜೆಪಿ ನಾಯಕರು ದೆಹಲಿಯಲ್ಲಿ ಕುಮಾರಸ್ವಾಮಿ ಜೊತೆ ಮಹತ್ವದ ಚರ್ಚೆ ನಡೆಸಿ ಸಮಾಧಾನಪಡಿಸುವ ಕಸರತ್ತು ಮಾಡಿದ್ದಾರೆ. ಸಂಸತ್ ಭವನದಲ್ಲೇ ರಾಜ್ಯಾಧ್ಯಜ್ಷ ಬಿವೈ ವಿಜಯೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್ ದಾಸ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಇದೀಗ ಸಭೆ ಮುಗಿದಿದ್ದು, ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ರಾಧಾಮೋಹನ್ ದಾಸ್ ಜಂಟಿ ಸುದ್ದಿಗೋಷ್ಟಿ ನಡೆಸಿದ್ದು, ಅದರ ನೇರಪ್ರಸಾರ ಇಲ್ಲಿದೆ ನೋಡಿ.

Published On - 4:44 pm, Thu, 1 August 24

Follow us on