ಕೊಲೆ ಆರೋಪದಲ್ಲಿ ಎಫ್ಐಅರ್ ಒಂದು ರಾಜಕೀಯ ಪಿತೂರಿ ಅಂತ ಬಸವರಾಜ ಹೇಳಿದ್ದಾರೆ: ವಿಜಯೇಂದ್ರ

Updated on: Jul 16, 2025 | 4:15 PM

ಸಿದ್ದರಾಮಯ್ಯನವರ ಮೊದಲ ಅವಧಿ ಮತ್ತು ಈಗ ಎರಡು ವರ್ಷಗಳ ಸಮಯದಲ್ಲಿ ಎಷ್ಟು ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಿದೆ ಅನ್ನೋದನ್ನು ತಿಳಿಸಬೇಕು, ಯಾಕೆಂದರೆ ಅವರ ಸರ್ಕಾರ ಯಾವತ್ತೂ ಉದ್ಯಮಗಳು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಪರ ಇಲ್ಲ, ಮುಖ್ಯಮಂತ್ರಿಯಾಗಿ ಯುವಕರಿಗೆ ಉದ್ಯೋಗಗಳನ್ನು ಹುಟ್ಟುಹಾಕುವುದಕ್ಕೆ ಅವರು ಪ್ರಯತ್ನಿಸಬೇಕೆಂದು ವಿಜಯೇಂದ್ರ ಹೇಳಿದರು.

ಬೆಂಗಳೂರು, ಜುಲೈ 16: ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ತಮ್ಮ ಪಕ್ಷದ ಶಾಸಕ ಭೈರತಿ ಬಸವರಾಜ (Byrathi Basavaraj) ವಿರುದ್ಧ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ಆಗಿರುವುದಕ್ಕೆ ಪ್ರತಿಕ್ರಿಯಿಸುತ್ತಾ ಇದೊಂದು ರಾಜಕೀಯ ಷಡ್ಯಂತ್ರ, ದುರುದ್ದೇಶದಿಂದ ತನ್ನ ವಿರುದ್ಧ ಕೇಸ್ ಹಾಕಲಾಗಿದೆ ಎಂದು ಖುದ್ದು ಬಸವರಾಜ ಅವರೇ ಹೇಳಿಕೆ ನೀಡಿದ್ದಾರೆ ಎಂದರು. ದೇವನಹಳ್ಳಿ ಸಮೀಪ ಏರೋಸ್ಪೇಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ರೈತರ ಪರ ನಿಂತಿದ್ದಾರೆ, ಅದರೆ ಸ್ವಯಂಪ್ರೇರಿತರಾಗಿ ಮಾರಲಿಚ್ಛಿಸುವ ರೈತರ ಜಮೀನನ್ನು ಸರ್ಕಾರ ಖರೀದಿಸುವುದಾಗಿ ಹೇಳಿ ಗೊಂದಲ ಮೂಡಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:   ಬೆಂಗಳೂರಿನಲ್ಲಿ ರೌಡಿಶೀಟರ್​ ಕೊಲೆ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ