ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಬದಲಾಯಿಸಲು ಸಂಪುಟ ಅನುಮೋದನೆ: ಹೆಚ್ ಕೆ ಪಾಟೀಲ್
ಬ್ರ್ಯಾಂಡ್ ಬೆಂಗಳೂರು ಬಿಲ್ಡ್ ಮಾಡುವ ಭರದಲ್ಲಿ ತುಮಕೂರು ಜಿಲ್ಲೆಯನ್ನೂ ಬೆಂಗಳೂರಿಗೆ ಸೇರಿಸಲಾಗುತ್ತಾ ಅಂತ ಕೇಳಿದ ಪ್ರಶ್ನೆಗೆ ಸಚಿವ ಪಾಟೀಲ್, ಇಲ್ಲ ಸೇರಿಸಲ್ಲ ಯಾಕೆಂದರೆ, ತುಮಕೂರು ಯಾವತ್ತೂ ಬೆಂಗಳೂರಿನ ಭಾಗವಾಗಿರಲಿಲ್ಲ ಅದರೆ ರಾಮನಗರ ಜಿಲ್ಲೆ ಮೊದಲಿಂದಲೂ ಬೆಂಗಳೂರಿನ ಭಾಗವಾಗಿತ್ತು ಎಂದರು.
ಬೆಂಗಳೂರು: ಉಪ ಮುಖ್ಯಮಂತ್ರಿ ಮತ್ತು ಕನಕಪುರದ ಶಾಸಕ ಡಿಕೆ ಶಿವಕುಮಾರ್ ತಾವಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಪುನರ್ ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ ಮತ್ತು ಅದರ ಬಗ್ಗೆ ಒಂದು ಪ್ರಸ್ತಾವ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದೇವೆ ಎಂದು ಹೇಳಿದ್ದರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್ ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಬದಲಾಯಿಸಲಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು. ಎಲ್ಲವೂ ಮೊದಲಿನಂತೆಯೇ ಇರುತ್ತದೆ ಹೆಸರು ಮಾತ್ರ ಬದಲಾಯಿಸಲಾಗುವುದು ಎಂದು ಪಾಟೀಲ್ ಹೇಳಿದರು. ಹೆಸರು ಬದಲಾವಣೆಯಿಂದ ಅಗುವ ಸಾಧನೆಯಾದರೂ ಏನು ಅಂತ ಕೇಳಿದಾಗ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಜಿಲ್ಲೆಯ ಜನರ ಆಶಯವೂ ಆಗಿತ್ತು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾವಣೆ ಸೇರಿದಂತೆ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು