ಸಮಸ್ಯೆಯಲ್ಲಿದ್ದವರಿಗೆ ಪರಿಹಾರ: ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!

Edited By:

Updated on: Aug 08, 2026 | 8:03 PM

ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್​​​​ನಲ್ಲಿ ಅಸಮಧಾನ ಸ್ಫೋಟಗೊಂಡಿದೆ. ಮಂತ್ರಿ ಸ್ಥಾನ ಸಿಗದ ಶಾಸಕರು ಪಕ್ಷದ ನಡೆಗೆ ಬೇಸರಗೊಂಡಿದ್ದು, ಇದೀಗ ಅವರನ್ನು ಸಮಾಧಾನಪಡಿಸಲು ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮನೆ ಮನೆಗೆ ತೆರಳಿ ಮಾತುಕತೆ ಮೂಲಕ ಮನವೊಲಿಸುವ ಯತ್ನ ನಡೆಸಿದ್ದಾರೆ. ಇದರ ಮಧ್ಯೆ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅಸಮಧಾನಿತ ಶಾಸಕರಿಗೆ ಜೆಡಿಎಸ್​​​​​​ಗೆ ಬರುವಂತೆ ಓಪನ್ ಆಫರ್ ನೀಡಿದ್ದಾರೆ.

ಹಾಸನ, (ಆಗಸ್ಟ್ 08): ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ (Cabinet Expansion) ಬೆನ್ನಲ್ಲೇ ಕಾಂಗ್ರೆಸ್​​​​ನಲ್ಲಿ (Karnataka Congress) ಅಸಮಧಾನ ಸ್ಫೋಟಗೊಂಡಿದೆ. ಮಂತ್ರಿ ಸ್ಥಾನ ಸಿಗದ ಶಾಸಕರು ಪಕ್ಷದ ನಡೆಗೆ ಬೇಸರಗೊಂಡಿದ್ದು, ಇದೀಗ ಅವರನ್ನು ಸಮಾಧಾನಪಡಿಸಲು ಸಿಎಂ ಡಿಕೆ ಶಿವಕುಮಾರ್ (DK Shivakumar),  ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮನೆ ಮನೆಗೆ ತೆರಳಿ ಮಾತುಕತೆ ಮೂಲಕ ಮನವೊಲಿಸುವ ಯತ್ನ ನಡೆಸಿದ್ದಾರೆ. ಇದರ ಮಧ್ಯೆ ಇತ್ತ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ಅಸಮಧಾನಿತ ಶಾಸಕರಿಗೆ ಗಾಳ ಹಾಕಿದ್ದು, ಜೆಡಿಎಸ್​​​​​​ಗೆ ಬರುವಂತೆ ಓಪನ್ ಆಫರ್ ನೀಡಿದ್ದಾರೆ.

ಈ ಬಗ್ಗೆ ಹಾಸನದ ಹರದನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ನೊಂದವರಿಗೆ, ನೋವಿನಲ್ಲಿರುವವರಿಗೆ ಹಾಗೂ ಸಮಸ್ಯೆಯಲ್ಲಿದ್ದವರಿಗೆ ಪರಿಹಾರ ಕೊಡುವ ಪಕ್ಷ. ನೋವಿನಲ್ಲಿರುವವರಿಗೆ ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುತ್ತೆ. ನೋವಿಗೆ ಪರಿಹಾರನೂ ದೊರಕುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಆಫರ್ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕಾಮಗ್ರೆಸ್ ಶಾಸಕರು ಜೆಡಿಎಸ್​​ನತ್ತ ಮುಖ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us