ಕೆನಡಾದಲ್ಲಿ ‘ಜೇಮ್ಸ್​’ ನೋಡಿ ಹುಚ್ಚೆದ್ದು ಕುಣಿದ ಕನ್ನಡಿಗರು

| Updated By: ರಾಜೇಶ್ ದುಗ್ಗುಮನೆ

Updated on: Mar 20, 2022 | 9:57 PM

ಪುನೀತ್ ಸಿನಿಮಾಗೆ ವಿದೇಶದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ‘ಜೇಮ್ಸ್​’ ಪ್ರದರ್ಶನ ಕಾಣುತ್ತಿದೆ.

ಪುನೀತ್​ ರಾಜ್​ಕುಮಾರ್ (Puneeth Rajkumar) ಹೀರೊ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿ ಮಾಡುತ್ತಿದೆ. ಈ ಚಿತ್ರವನ್ನು ನೋಡೋಕೆ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 9.9 ರೇಟಿಂಗ್​ ಸಿಕ್ಕಿರೋದು ವಿಶೇಷ. ಪುನೀತ್ ಸಿನಿಮಾಗೆ ವಿದೇಶದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ‘ಜೇಮ್ಸ್​’ (James Movie) ಪ್ರದರ್ಶನ ಕಾಣುತ್ತಿದೆ. ಈಗ ದೂರದ ಕೆನಡಾದಲ್ಲಿ ಪುನೀತ್​ ಚಿತ್ರ ರಿಲೀಸ್ ಆಗಿದೆ. ಈ ಚಿತ್ರವನ್ನು ನೋಡಿದ ಅಲ್ಲಿನ ಕನ್ನಡಿಗರು ಥಿಯೇಟರ್​ನಲ್ಲಿ ಸಖತ್​ ಖುಷಿಪಟ್ಟಿದ್ದಾರೆ. ಮೊಬೈಲ್​ನಲ್ಲಿ ಟಾರ್ಚ್ ಆನ್​ ಮಾಡಿ ಪ್ರದರ್ಶಿಸುವ ಮೂಲಕ ಅಪ್ಪುಗೆ ವಿಶೇಷ ನಮನ ಸಲ್ಲಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ. ಮಾರ್ಚ್​ 17ರಂದು ‘ಜೇಮ್ಸ್’ ಸಿನಿಮಾ ತೆರೆಗೆ ಬಂದಿದೆ. ಚೇತನ್​ ಕುಮಾರ್ ನಿರ್ದೇಶನದ ಈ ಸಿನಿಮಾಗೆ ಪ್ರಿಯಾ ಆನಂದ್ ನಾಯಕಿ.

ಇದನ್ನೂ ಓದಿ: ಪುನೀತ್​ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ

‘ಪುನೀತ್​ ನಟನೆಯ ಜೇಮ್ಸ್​ ನೋಡಿದ್ರಾ?’; ಈ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಜ್ಯೂ.ಎನ್​ಟಿಆರ್​

Published on: Mar 20, 2022 09:45 PM