ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS
ಮುಖ್ಯಾಂಶಗಳು
- ನವೆಂಬರ್ ನಲ್ಲೇ 99 ಅಡಿಗೆ ಕುಸಿದ KRS ಡ್ಯಾಂ ನೀರಿನ ಮಟ್ಟ
- ನೀರಿನ ಮಟ್ಟ ಕುಸಿಯುತ್ತಿದ್ರೂ ತಮಿಳುನಾಡಿಗೆ ನಿರಂತರ ನೀರು
- ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಕಾವೇರಿ ನೀರು ಅವಲಂಭಿತ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ
ಒಂದೆಡೆ ಕಾವೇರಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ರೂ ಇನ್ನೊಂದೆಡೆ ತಮಿಳುನಾಡಿಗೆ ನಿರಂತರ ನೀರು ಹರಿಯುತ್ತಲೇ ಇದೆ. ಹೌದು....ಮಳೆ ಇಲ್ಲದೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ ಇದೆ. ಇದರ ಮದ್ಯೆ ನಿರಂತರವಾಗಿ ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದ್ದು, ಇದರಿಂದ ನವೆಂಬರ್ ನಲ್ಲೇ KRS ಡ್ಯಾಂ ನೀರಿನ ಮಟ್ಟ 99 ಅಡಿಗೆ ಕುಸಿದಿದೆ. ನೀರಿನ ಮಟ್ಟ ಕುಸಿಯುತ್ತಿದ್ರೂ ತಮಿಳುನಾಡಿಗೆ ನಿರಂತರ ನೀರು. CWMA ಆದೇಶ ಹಿನ್ನೆಲೆಯಲ್ಲಿ ನಿರಂತರ ನೀರು ಬಿಡುಗಡೆಯಿಂದಾಯ ಕಾವೇರಿ ಜಲಾಶಯ ಬರಿದಾಗುತ್ತಿದ್ದು, ಒಂದು ವಾರದ ಅಂತರದಲ್ಲಿ 5 ಅಡಿ ನೀರು ಖಾಲಿಯಾಗಿದೆ.
ಮಂಡ್ಯ,ನವೆಂಬರ್ 05: ಒಂದೆಡೆ ಕಾವೇರಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ರೂ ಇನ್ನೊಂದೆಡೆ ತಮಿಳುನಾಡಿಗೆ ನಿರಂತರ ನೀರು ಹರಿಯುತ್ತಲೇ ಇದೆ. ಹೌದು….ಮಳೆ ಇಲ್ಲದೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ ಇದೆ. ಇದರ ಮದ್ಯೆ ನಿರಂತರವಾಗಿ ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದ್ದು, ಇದರಿಂದ ನವೆಂಬರ್ ನಲ್ಲೇ KRS ಡ್ಯಾಂ ನೀರಿನ ಮಟ್ಟ 99 ಅಡಿಗೆ ಕುಸಿದಿದೆ. ನೀರಿನ ಮಟ್ಟ ಕುಸಿಯುತ್ತಿದ್ರೂ ತಮಿಳುನಾಡಿಗೆ ನಿರಂತರ ನೀರು. CWMA ಆದೇಶ ಹಿನ್ನೆಲೆಯಲ್ಲಿ ನಿರಂತರ ನೀರು ಬಿಡುಗಡೆಯಿಂದಾಯ ಕಾವೇರಿ ಜಲಾಶಯ ಬರಿದಾಗುತ್ತಿದ್ದು, ಒಂದು ವಾರದ ಅಂತರದಲ್ಲಿ 5 ಅಡಿ ನೀರು ಖಾಲಿಯಾಗಿದೆ. ಇದರೊಂದಿಗೆ ನೀರಿನ ಮಟ್ಟ 104 ಅಡಿಯಿಂದ 99 ಅಡಿಗೆ ಕುಸಿದಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಭೀತಿ ಎದುರಾಗಿದೆ.
ಸದ್ಯ ಡ್ಯಾಂನಿಂದ 7884ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಈ ಪೈಕಿ 3 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದೆ. ಸದ್ಯ ಡ್ಯಾಂನಲ್ಲಿ 22 ಟಿಎಂಸಿ ನೀರು ಮಾತ್ರ ಶೇಖರಣೆ ಇದ್ದು, 22 ಟಿಎಂಸಿಯಲ್ಲಿ 6 ಟಿಎಂಸಿ ಡೆಡ್ ಸ್ಟೋರೇಜ್. ಬಳಕೆಗೆ ಲಭ್ಯ ಇರೋದು ಕೇವಲ 16 ಟಿಎಂಸಿ ನೀರು ಮಾತ್ರ. ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಕಾವೇರಿ ನೀರು ಅವಲಂಭಿತ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಈ ಬಗ್ಗೆ ನಮ್ಮ ಪ್ರತಿನಿಧಿ ದಿಲೀಪ್, ಡ್ಯಾಂ ಬಳಿಯಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
ನಿರಂತರವಾಗಿ ನೀರು ಹರಿಯುತ್ತಿದ್ದರೂ ಸಹ ತಮಿಳುನಾಡು, ಅಕ್ಟೋಬರ್ 23ರಿಂದ ಕರ್ನಾಟಕವು ಕಾವೇರಿ ನದಿ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದೆ. ಈ ವಿಚಾರದಲ್ಲಿ ತುರ್ತು ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
