ಕಳ್ಳನ ಕರಾಮತ್ತು: ಭಕ್ತಿಯಿಂದ ನಮಸ್ಕರಿಸಿ ಕೊರಗಜ್ಜನ ಕಟ್ಟೆ ಕಾಣಿಕೆ ಹುಂಡಿ ಕದ್ದೊಯ್ದ ಖದೀಮ

Edited By:

Updated on: Apr 30, 2025 | 8:12 AM

ಖದೀಮನೊಬ್ಬ ಕಾರಣಿಕ ದೈವ ಕೊರಗಜ್ಜನ ಕಟ್ಟೆಗೆ ಸುತ್ತು ಬಂದು ಕೊರಗಜ್ಜನಿಗೆ ನಮಸ್ಕರಿಸಿ ಅಲ್ಲಿದ್ದ ಹುಂಡಿಯನ್ನೇ ಹೊತ್ತೊಯ್ದ ಘಟನೆ ಮಂಗಳೂರು ನಗರದ ಮೇರಿಹಿಲ್​​ನಲ್ಲಿ ನಡೆದಿದೆ. ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಖದೀಮ ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದಾನೆ. ಆತ ಹುಂಡಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

ಮಂಗಳೂರು, ಏಪ್ರಿಲ್ 30: ಮಂಗಳೂರು ನಗರದ ಮೇರಿಹಿಲ್​​ನ ಕೊರಗಜ್ಜನ ಕಟ್ಟೆಗೆ ಬಂದ ಕಳ್ಳನೊಬ್ಬ ಭಕ್ತಿಯಿಂದ ನಮಸ್ಕರಿಸಿ, ಕಟ್ಟೆಗೆ ಮೂರು ಸುತ್ತು ಬಂದು ಪುನಃ ಕೊರಗಜ್ಜನಿಗೆ ನಮಸ್ಕರಿಸಿ ನಂತರ ಅಲ್ಲಿದ್ದ ಕಾಣಿಕೆ ಹುಂಡಿಯನ್ನೇ ಕದ್ದೊಯ್ದಿದ್ದಾನೆ. ಕಳ್ಳನ ಕರಾಮತ್ತು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ. ಕರಾವಳಿ ಕರ್ನಾಟಕದಲ್ಲಿ ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗಜ್ಜನ ಆರಾಧಕರು ಬಹಳಷ್ಟು ಮಂದಿ ಇದ್ದಾರೆ. ಕೊರಗಜ್ಜ ಈ ಭಾಗದ ಪ್ರಖ್ಯಾತ ಹಾಗೂ ಕಾರಣಕ ದೈವವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 30, 2025 08:06 AM
Loading...
Unable to load recommendations.
Follow Us
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More