VIDEO: ಪಂದ್ಯದ ಬಳಿಕ ರಿಂಕು ಸಿಂಗ್ ಕಪಾಳಕ್ಕೆ ಬಾರಿಸಿದ ಕುಲ್ದೀಪ್ ಯಾದವ್
IPL 2025 DC vs KKR: ಐಪಿಎಲ್ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಗ್ಗರಿಸಿದೆ. ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 204 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 190 ರನ್ಗಳಿಸಲಷ್ಟೇ ಶಕ್ತರಾದರು.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2025) 48ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 190 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 190 ರನ್ಗಳಿಸಿ 14 ರನ್ಗಳಿಂದ ಸೋಲೊಪ್ಪಿಕೊಂಢಿದೆ.
ಈ ಪಂದ್ಯದ ಸಮಾರೋಪ ಸಮಾರಂಭದ ಉಭಯ ತಂಡಗಳ ಆಟಗಾರರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಕೆಕೆಆರ್ ತಂಡದ ರಿಂಕು ಸಿಂಗ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲ್ದೀಪ್ ಯಾದವ್ ಕಪಾಳ ಮೋಕ್ಷ ಮಾಡಿದ್ದಾರೆ. ಇಬ್ಬರು ಟೀಮ್ ಇಂಡಿಯಾ ಆಟಗಾರರಾಗಿರುವ ಕಾರಣ ತುಂಬಾ ಆತ್ಮೀಯತೆ ಇದೆ. ಹೀಗಾಗಿ ರಿಂಕು ಸಿಂಗ್ ಅವರನ್ನು ನೋಡುತ್ತಿದ್ದಂತೆ ಕುಲ್ದೀಪ್ ಯಾದವ್ ಮುಖಕ್ಕೆ ಹೊಡೆದಿದ್ದಾರೆ. ಈ ವೇಳೆ ರಿಂಕು ತುಸು ಕೋಪಗೊಂಡಂತೆ ಕಂಡು ಬಂದರು. ರಿಂಕುವಿನ ಸಿಟ್ಟು ನೋಡುತ್ತಿದ್ದಂತೆ ಕುಲ್ದೀಪ್ ಮತ್ತೊಮ್ಮೆ ಕಪಾಳಕ್ಕೆ ಬಾರಿಸಿದರು. ಇದೀಗ ಆಟಗಾರರ ನಡುವಣ ಈ ಆತ್ಮೀಯ ಕ್ಷಣಗಳ ವಿಡಿಯೋ ವೈರಲ್ ಆಗಿದೆ.