ಚಿತ್ರದುರ್ಗದಲ್ಲಿ ಸಿಡಿ ಉತ್ಸವ ವೇಳೆ ಭಕ್ತರ ಮೇಲೆ ಮುರಿದುಬಿದ್ದ ಸಿಡಿ ಕಂಬ! ಮೊಬೈಲ್​ನಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ

| Updated By: sandhya thejappa

Updated on: Apr 30, 2022 | 9:27 AM

ಸಿಡಿ ಕಂಬ ಭಕ್ತರ ಮೇಲೆ ಬೀಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ದಿಡೀರ್ ಸಿಡಿ ಕಂಬ ಮುರಿದು ಬಿದ್ದಿದ್ದರಿಂದ ಭಕ್ತರಲ್ಲಿ ಅಪಶಕುನದ ಭೀತಿ ಎದುರಾಗಿದೆ. ಸರ್ಕಾರದಿಂದ ಸಿಡಿ ಉತ್ಸವ ನಿಷೇಧವಿದ್ದರೂ ಆಚರಣೆ ಮಾಡಿದ್ದಾರೆ.

ಚಿತ್ರದುರ್ಗ: ಸಿಡಿ ಉತ್ಸವಕ್ಕೆ (Sidi Utsava) ಸರ್ಕಾರ ನಿಷೇಧ ಹೇರಿದೆ. ಹೀಗಿದ್ದೂ ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಿಡಿ ಉತ್ಸವಕ್ಕೆ ಮುಂದಾಗಿದ್ದರು. ಸಿಡಿ ಉತ್ಸವದ ವೇಳೆ ಭಕ್ತರ ಮೇಲೆ ಸಿಡಿ ಕಂಬ ಮುರಿದು ಬಿದ್ದಿರುವ ಘಟನೆಯೂ ಇಲ್ಲಿ ನಡೆದಿದೆ. ಕರಿಯಮ್ಮ ದೇವಿ ಉತ್ಸವದ ವೇಳೆ ಸಿಡಿ ಕಂಬ ಮುರಿದುಬಿದ್ದಿದೆ. ಸಿಡಿ ಕಂಬ ಬಿದ್ದ ರಭಸದಿಂದ ಶಿವಕುಮಾರ್​ಗೆ ಗಂಭೀರ ಗಾಯವಾಗಿದೆ. ಸಿಡಿ ಕಂಬದಲ್ಲಿ ಆಡುತ್ತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿ ಕಂಬ ಭಕ್ತರ ಮೇಲೆ ಬೀಳುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ದಿಡೀರ್ ಸಿಡಿ ಕಂಬ ಮುರಿದು ಬಿದ್ದಿದ್ದರಿಂದ ಭಕ್ತರಲ್ಲಿ ಅಪಶಕುನದ ಭೀತಿ ಎದುರಾಗಿದೆ. ಸರ್ಕಾರದಿಂದ ಸಿಡಿ ಉತ್ಸವ ನಿಷೇಧವಿದ್ದರೂ ಆಚರಣೆ ಮಾಡಿದ್ದಾರೆ.

ಇದನ್ನೂ ಓದಿ

ಹೃದಯಾಘಾತದಿಂದ ತುಮಕೂರು ಗುಪ್ತವಾರ್ತೆ ಡಿವೈಎಸ್​ಪಿ ಶಿವಕುಮಾರ್ ನಿಧನ

ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ಮೊಹಮ್ಮದ್ ಆರೀಫ್ ಜೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನ; ಆಸ್ಪತ್ರೆಯಲ್ಲಿ ಚಿಕಿತ್ಸೆ

Published on: Apr 30, 2022 09:27 AM