ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​

|

Updated on: Dec 21, 2024 | 2:28 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರು ಹೊರ ಹೋಗಿ ಬಂದಿದ್ದರು. ಈ ವೇಳೆ ಹೊರಗಿನ ವಿಚಾರಗಳನ್ನು ಅವರು ಹೇಳಿದ್ದರು. ಈ ಕಾರಣಕ್ಕೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದು ಮತ್ತೆ ಮರುಕಳಿಸುವ ಸೂಚನೆ ಸಿಕ್ಕಿದೆ. ಈ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರು ಮಾಡಿಕೊಳ್ಳುವ ಎಡವಟ್ಟುಗಳು ಒಂದೆರಡಲ್ಲ. ಈ ಮೊದಲು ಹೊರಗಿನ ವಿಚಾರಗಳನ್ನು ಎಲ್ಲರ ಎದುರು ಹೇಳಿ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಕಾರಣಕ್ಕೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಸುದೀಪ್ ಅವರು ಮತ್ತೆ ಕ್ಲಾಸ್ ತೆಗೆದುಕೊಳ್ಳುವ ಸೂಚನೆ ಸಿಕ್ಕಿದೆ. ಉಸ್ತುವಾರಿ ಸರಿಯಾಗಿ ನಿರ್ವಹಿಸದ ಚೈತ್ರಾಗೆ ಸುದೀಪ್ ಕಣ್ಣೀರು ಹಾಕಿಸೋದು ಪಕ್ಕಾ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.