ನಟ ಧನಂಜಯ ಅವರನ್ನು ಹಾಡಿ ಹೊಗಳಿದ ಚಕ್ರವರ್ತಿ ಚಂದ್ರಚೂಡ್
ಚಕ್ರವರ್ತಿ ಚಂದ್ರಚೂಡ್ ಕೂಡ ಆಗಮಿಸಿದ್ದರು. ವೇದಿಕೆ ಏರಿದ ಅವರು ಧನಂಜಯ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನು ಆಡಿದರು. ಕೇವಲ ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಧನಂಜಯ ಮಿಂಚುತ್ತಿದ್ದಾರೆ. ಈ ವಿಚಾರದ ಬಗ್ಗೆ ಚಕ್ರವರ್ತಿ ಅವರಿಗೆ ಹೆಮ್ಮೆ ಇದೆ.
‘ಕನ್ನಡ ಬಿಗ್ ಬಾಸ್ ಸೀಸನ್ 8’ರಲ್ಲಿ (Bigg Boss) ಪಾಲ್ಗೊಳ್ಳುವ ಮೂಲಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ಎಲ್ಲರ ಗಮನ ಸೆಳೆದಿದ್ದರು. ಅವರು ವಿವಾದದ ಮೂಲಕವೇ ಸುದ್ದಿ ಆಗಿದ್ದು ಹೆಚ್ಚು. ಅವರು ನಟ ಧನಂಜಯ (Dhananjay) ಅವರನ್ನು ಹಾಡಿ ಹೊಗಳಿದ್ದಾರೆ. ಧನಂಜಯ ನಿರ್ಮಾಣ ಮಾಡಿ, ನಟಿಸಿರುವ ‘ಬಡವ ರಾಸ್ಕಲ್’ ಸಿನಿಮಾ ಚಿತ್ರಮಂದಿರ ಹಾಗೂ ಒಟಿಟಿ ಎರಡರಲ್ಲೂ ಗೆದ್ದಿದೆ. ಧನಂಜಯ ಅವರು ಮಧ್ಯಮ ವರ್ಗದ ಹುಡುಗನಾಗಿ ಮಿಂಚಿದ್ದಾರೆ. ಈ ಸಿನಿಮಾ ತಂಡ ಇತ್ತೀಚೆಗೆ ಗೆಲುವಿನ ಸಂಭ್ರಮ ಹಂಚಿಕೊಳ್ಳಲು ಸಕ್ಸಸ್ ಮೀಟ್ ನಡೆಸಿತ್ತು. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಕೂಡ ಆಗಮಿಸಿದ್ದರು. ವೇದಿಕೆ ಏರಿದ ಅವರು ಧನಂಜಯ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನು ಆಡಿದರು. ಕೇವಲ ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಧನಂಜಯ ಮಿಂಚುತ್ತಿದ್ದಾರೆ. ಈ ವಿಚಾರದ ಬಗ್ಗೆ ಚಕ್ರವರ್ತಿ ಅವರಿಗೆ ಹೆಮ್ಮೆ ಇದೆ. ಇದನ್ನು ವೇದಿಕೆ ಮೇಲೆ ಅವರು ವ್ಯಕ್ತಪಡಿಸಿದರು.
ಇದನ್ನೂ ಓದಿ:‘ಹೆಡ್ ಬುಷ್’ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರ ಏನು? ಗುಟ್ಟು ಬಿಟ್ಟುಕೊಟ್ಟ ಧನಂಜಯ
‘ಅವರಿಂದ ಪಡೆದ ಹಣ ನಾನಿನ್ನೂ ವಾಪಸ್ ಕೊಟ್ಟಿಲ್ಲ’; ಇನ್ಸೈಡ್ ಮಾಹಿತಿ ಬಹಿರಂಗ ಪಡಿಸಿದ ಧನಂಜಯ