ಚಾಮರಾಜನಗರ ದಸರಾ ಮಹೋತ್ಸವ: ಬರೋಬ್ಬರಿ 13 ಲೀಟರ್​, 200 ಗ್ರಾಂ ಹಾಲು ಕರೆದ ಯುವ ರೈತ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 7:57 PM

ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಹತ್ತಾರು ರೈತರು ಭಾಗಿಯಾಗಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ್ ಅವರು ಹಾಲು ಕರೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಇನ್ನು ಈ ಸ್ಫರ್ಧೆಯಲ್ಲಿ ಬರೋಬ್ಬರಿ 13 ಲೀಟರ್​ 200 ಗ್ರಾಂ ಹಾಲು ಕರೆಯು ಮೂಲಕ ಮೇಲಾಜಿಪುರದ ಯುವ ರೈತ ನವೀನ್ ಎಂಬುವವರು ಮೊದಲ ಸ್ಥಾನ ಪಡೆದು, 15 ಸಾವಿರ ರೂಪಾಯಿ ನಗದು ಬಹುಮಾನ ಪಡೆದರು

ಚಾಮರಾಜನಗರ, ಅ.18: ಜಿಲ್ಲೆಯಲ್ಲಿ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಇದರ ಮೆರುಗು ಹೆಚ್ಚಿಸಲು ಇದೇ ಮೊದಲ ಬಾರಿಗೆ  ಚಾಮರಾಜನಗರ (Chamarajanagar) ದಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಹತ್ತಾರು ರೈತರು ಭಾಗಿಯಾಗಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ್ ಅವರು ಹಾಲು ಕರೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಇನ್ನು ಈ ಸ್ಫರ್ಧೆಯಲ್ಲಿ ಬರೋಬ್ಬರಿ 13 ಲೀಟರ್​ 200 ಗ್ರಾಂ ಹಾಲು ಕರೆಯು ಮೂಲಕ ಮೇಲಾಜಿಪುರದ ಯುವ ರೈತ ನವೀನ್ ಎಂಬುವವರು ಮೊದಲ ಸ್ಥಾನ ಪಡೆದು, 15 ಸಾವಿರ ರೂಪಾಯಿ ನಗದು ಬಹುಮಾನ ಪಡೆದರೆ, ಕಾಗಲವಾಡಿ ರೈತ ಮುರುಗೇಶ್  ಅವರು 8 ಲೀಟರ್​ 300 ಗ್ರಾಂ ಹಾಲು ಕರೆದು, ಎರಡನೇ ಬಹುಮಾನ 10 ಸಾವಿರ ನಗದು ತಮ್ಮದಾಗಿಸಿಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ