ಭಾರತೀಯ ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಪೂಜೆ ವೇಳೆ ಬಲಭಾಗದಿಂದ ಹೂ ನೀಡಿದ ದೇವರು

Edited By:

Updated on: May 08, 2025 | 11:14 AM

ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ತುಂಬಲು ಚಾಮರಾಜನಗರದ ರಾಮಸಮುದ್ರದಲ್ಲಿರುವ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವಾಲಯ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಮಾಡಲಾಯಿತು. ಇದೇ ವೇಳೆ ದೇವರ ಮೇಲಿದ್ದ ಬಲಭಾಗದ ಹೂವು ಕೆಳಗೆ ಬಿದ್ದು ಶುಭ ಶಕುನ ಕಾಣಿಸಿತು. ಇದು ಭಕ್ತರ ಸಂಭ್ರಮಕ್ಕೆ ಕಾರಣವಾಯಿತು.

ಚಾಮರಾಜನಗರ, ಮೇ 8: ಪಾಕಿಸ್ತಾನದ ನೆಲಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಉಡೀಸ್ ಮಾಡಲು ಭಾರತೀಯ ಸೇನೆಗೆ ಬಲ ತುಂಬುವ ನಿಟ್ಟಿನಲ್ಲಿ ಚಾಮರಾಜನಗರದ ರಾಮಸಮುದ್ರದಲ್ಲಿರುವ ಲಕ್ಷ್ಮೀ ಜನಾರ್ದನ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಇದೇ ವೇಳೆ, ಅರ್ಚಕ ಅನಂತ ಪ್ರಸಾದ್ ವಿಶೇಷ ಪ್ರಾರ್ಥನೆ ಮಾಡಿದರು. ಆ ಸಂದರ್ಭದಲ್ಲಿ ಬಲಭಾಗದಿಂದ ದೇವರು ಹೂವನ್ನು ನೀಡಿದ್ದು, ಭಕ್ತರಲ್ಲಿ ಹರ್ಷ ಮೂಡಿಸಿತು. ದೇವರು ಬಲಭಾಗದಿಂದ ಹೂ ನೀಡಿ ಸೇನೆಗೆ ಶಕ್ತಿ ತುಂಬಿದ್ದಾನೆ ಎಂದು ಭಕ್ತರು ಅಭಿಪ್ರಾಯಪಟ್ಟರು.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ