ಚಾಮರಾಜನಗರ: ಪೊಲೀಸರು ಲಾಠಿ ಹಿಡಿದು ಬಂದ್ರೂ ಕ್ಯಾರೇ ಅನ್ನದ ಮಂಗಳ ಮಖಿಯರು, ವಿಡಿಯೋ ವೈರಲ್

ಚಾಮರಾಜನಗರದಲ್ಲಿ ನಡೆದ ಮಂಗಳಮುಖಿಯರ ಗ್ಯಾಂಗ್​ ವಾರ್ ಸಂಬಂಧಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಲಾಠಿ ಹಿಡಿದು ಬಂದರೂ ಜಪ್ಪಯ್ಯ ಅನ್ನದ ಮಂಗಳಮುಖಿಯರು ಗಲಾಟೆ ಮುಂದುವರಿಸಿದ್ದಾರೆ. ಆಮೇಲೇನಾಯ್ತು? ಇಲ್ಲಿದೆ ವಿಡಿಯೋ, ನೋಡಿ.

ಚಾಮರಾಜನಗರ, ನವೆಂಬರ್ 12: ಚಾಮರಾಜನಗರ ತಮಿಳುನಾಡು ರಸ್ತೆಯಲ್ಲಿ ಮಂಗಳ ಮಖಿಯರ ಗ್ಯಾಂಗ್ ವಾರ್ ಪ್ರಕರಣ ಸಂಬಂಧಿತ ಇನ್ನಷ್ಟು ವಿಡಿಯೋಗಳೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಗಲಾಟೆಯಿಂದ ತಮಿಳುನಾಡು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಹೀಗಾಗಿ ನಿಯಂತ್ರಿಸಲು ಪೊಲೀಸರು ಬಂದಿದ್ದಾರೆ. ಆದರೆ, ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಬಂದರೂ ಬಗ್ಗದ ತೃತೀಯ ಲಿಂಗಿಯರು, ಮಾರಮಾರಿ ನಡೆಸಿದ್ದಾರೆ.

ಸರಿ ಸುಮಾರು 30 ಕ್ಕೂ ಹೆಚ್ಚು ತೃತೀಯ ಲಿಂಗಿಯರು ಮೈಸೂರಿನಿಂದ ಟಿಟಿ ವಾಹನದಲ್ಲಿ ಬಂದು ಗಲಾಟೆ ಮಾಡಿದ್ದಾರೆ. ಗಲಾಟೆ ಹಿನ್ನಲೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರು. ಮತ್ತೊಂದೆಡೆ, ‘ಟಿವಿ9’ ವರದಿ ಪ್ರಸಾರ ಬಳಿಕ, ಸ್ಥಳಕ್ಕೆ ಧಾವಿಸಿರುವ ಪೊಲೀಸರು ಗಲಾಟೆ ಮಾಡಿದ ಮಂಗಳಮುಖಿಯರ ವಿಚಾರಣೆ ನಡೆಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸರಿಂದ 10 ಕ್ಕೂ ಹೆಚ್ಚು ಮಂಗಳಮುಖಿಯರ ವಿಚಾರಣೆ ನಡೆಸಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us