ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯರ ಸರ್ಕಾರ ಎರಡು ವರ್ಷಗಳಿಂದ ಸುಭದ್ರವಾಗಿದೆ: ಶಿವಲಿಂಗೇಗೌಡ

Updated on: May 16, 2025 | 5:24 PM

ಮಂತ್ರಿಯಾಗುವ ಆಸೆಯನ್ನು ಮತ್ತೊಮ್ಮೆ ಹೇಳಿಕೊಂಡ ಶಿವಲಿಂಗೇಗೌಡ, ಮಂತ್ರಿ ಮಾಡುವ ಭರವಸೆ ನೀಡಿಯೇ ಸಿದ್ದರಾಮಯ್ಯನವರು ತನ್ನನ್ನು ಜೆಡಿಎಸ್ ನಿಂದ ಕಾಂಗ್ರೆಸ್​ಗೆ ಕರೆತಂದಿದ್ದಾರೆ, ಮಂತ್ರಿಸ್ಥಾನ ನೀಡುವ ಆಶ್ವಾಸನೆಯನ್ನು ಪದೇಪದೆ ನೀಡುತ್ತಿದ್ದಾರೆ, ಎರಡೂವರೆ ವರ್ಷಗಳ ನಂತರ ಮಂತ್ರಿಮಂಡಳದ ಪುನಾರಚನೆಯಾದಾಗ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಹೇಳಿದರು.

ಹಾಸನ, ಮೇ 16: ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಕೆಎಂ ಶಿವಲಿಂಗೇಗೌಡ, ಆರ್ಥಿಕ ತಜ್ಞರಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah) ಎರಡು ವರ್ಷಗಳಿಂದ ಸುಭದ್ರವಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ, ಬಡವರ ಮನೆಗಳಿಗೆ ಬೇರೆ ಬೇರೆ ಯೋಜನೆಗಳ ಮೂಲಕ ಪ್ರತಿ ತಿಂಳು ₹ 5,000 ತಲುಪಿಸುವ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ, ವಿರೋಧ ಪಕ್ಷಗಳು ಅವರನ್ನು ಟೀಕಿಸುತ್ತಿವೆ, ಯಾರೇನೇ ಕಾಮೆಂಟ್ ಮಾಡಿದರೂ ಅವರನ್ನು ಏನೂ ಮಾಡಕ್ಕಾಗಲ್ಲ, ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳಬಹುದು ಎಂದು ಹೇಳಿದರು.

ಇದನ್ನೂ ಓದಿ:  ತೆರಿಗೆ ಹಣ ಹಂಚಿಕೆಯಲ್ಲಿ ಅನ್ಯಾಯವಾಗದಿದ್ರೆ ರಾಜ್ಯ ರೆವಿನ್ಯೂ ಸರ್ಪ್ಲಸ್ ಒಳಗಡೆ ಬರಬಹುದು: ಶಿವಲಿಂಗೇಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More