ಅಮೇರಿಕದಲ್ಲಿ ಶೆವರ್ಲೆಯ ‘2024 ಸಿಲ್ವೆರಾಡೊ ಇಲೆಕ್ಟ್ರಿಕ್ ಪಿಕ್-ಅಪ್ ಟ್ರಕ್’ 2023ರಲ್ಲಿ ಲಾಂಚ್ ಆಗಲಿದೆ; ಬೆಲೆ ಎಷ್ಟು?
ಟಾಮ್-ಟ್ರಿಮ್ ಆರ್ ಎಸ್ ಟಿ ಮತ್ತು ಡಬ್ಲ್ಯೂಟಿ-ಬೇಸ್ ಆವೃತ್ತಿಗಳಲ್ಲಿ ಲಭ್ಯವಾಗಲಿರುವ 2024 ಸಿಲ್ವೆರಾಡೊ ಇಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಬೆಲೆ ಅಮೇರಿಕನಲ್ಲಿ ಭಾರತೀಯ ಕರೆನ್ಸಿ ಪ್ರಕಾರ ರೂ. 30 ಲಕ್ಷಗಳಿಂದ ರೂ. 78 ಲಕ್ಷಗಳವರೆಗೆ ಇರಲಿದೆ.
ಶೆವರ್ಲೆ ಮೊಟಾರ್ ಕಂಪನಿಯು ತನ್ನ 2024 ಸಿಲ್ವೆರಾಡೊ ಇಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ಕನ್ನು ಅಮೇರಿಕನಲ್ಲಿ ಲಾಂಚ್ ಮಾಡಲು ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹಾಗೆ ನೋಡಿದರೆ ಸಿಲ್ವೆರಾಡೊ ಇಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ಕಿನ ಸಾಕಷ್ಟು ಮೊದಲೇ ಆಗಬೇಕಿತ್ತು. ಯಾಕೆಂದರೆ, ಈ ಸಂಸ್ಥೆಯ ಕೆಲ ಪ್ರತಿಸ್ಪರ್ಧಿಗಳು ಈಗಾಗಲೇ ಈ ನಮೂನೆಯ ವಾಹನಗಳನ್ನು ಲಾಂಚ್ ಮಾಡಿವೆ. ಆದರೆ, ಹಿಂದಿಯಲ್ಲಿ ಅದೇನೋ ಹೇಳುತ್ತಾರಲ್ಲ ದೇರ್ ಆಯೆ ಮಗರ್ ದುರುಸ್ತ್ ಆಯೇ ಅಂತ… ಶೆವರ್ಲೆ 650 ಕಿಮೀ ರೇಂಜ್ ಮತ್ತು 644 ಹಾರ್ಸ್ ಪವರ್ ಔಟ್ಪುಟ್ನ ಸಾಕಷ್ಟು ಗಟ್ಟಿಮುಟ್ಟಾದ ವಾಹನವನ್ನು ರಸ್ತೆಗಿಳಿಸಲಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಂಪನಿಯು ಸಿಲ್ವೆರಾಡೊ ಇಲೆಕ್ಟ್ರಿಕ್ ಪಿಕ್-ಅಪ್ ವಾಹನಕ್ಕಾಗಿ ಅದಾಗಲೇ ಬುಕಿಂಗ್ ಸಹ ಆರಂಭಿಸಿದ್ದು 2023 ರಲ್ಲಿ ಡೆಲಿವರಿ ಕಾರ್ಯ ಶುರುವಾಗಲಿದೆ. ಲಾಸ್ ವೇಗಾಸ್, ನೆವೆಡಾನಲ್ಲಿ ನಡೆದ ಸಿ ಈ ಎಸ್ 2022 ನಲ್ಲಿ ಸಿಲ್ವೆರಾಡೊ ಇಲೆಕ್ಟ್ರಿಕ್ ಟ್ರಕ್ಕನ್ನು ಪ್ರದರ್ಶಿಸಲಾಯಿತು.
ಸಿಲ್ವೆರಾಡೊ ಇಲೆಕ್ಟ್ರಿಕ್ ವಾಹನದಲ್ಲಿ ಶೆವರ್ಲೆ ಕಂಪನಿಯು ಹಮ್ಮರ್ ಇವಿಯ ಅಂಡರ್‌ಪಿನ್ನಿಂಗ್‌ಗಳನ್ನು ಬಳಸಿದೆ ಮತ್ತು ಸಾಂಪ್ರದಾಯಿಕ ಸಿಲ್ವೆರಾಡೋನಲ್ಲಿ ಬಳಸಿರುವ ಯಾವುದೇ ಭಾಗವನ್ನು ಇದರಲ್ಲಿ ಉಪಯೋಗಿಸಿಲ್ಲ. ದೃಷ್ಟಿಗೋಚರವಾಗಿ ಸಿಲ್ವೆರಾಡೊ ಇಲೆಕ್ಟ್ರಿಕ್ ನಿರ್ದಿಷ್ಟ ಕಾಸ್ಮೆಟಿಕ್ ಟ್ವೀಕ್, ಮುಂಭಾಗದಲ್ಲಿ ಹೊಸ ಬಂಪರ್ ಮತ್ತು ಗ್ರಿಲ್ ವಿನ್ಯಾಸ ಸಣ್ಣ ಏರ್ ಇನ್‌ಟೇಕ್‌ಗಳು ಮತ್ತು ಪೂರ್ಣ-ಅಗಲದ ಎಲ್ಇಡಿ ಸ್ಟ್ರಿಪ್ ಅನ್ನು ಒಳಗೊಂಡಿವೆ.
ಕಾರ್ ಕಂಬಗಳು ಮತ್ತು ಮೇಲ್ಛಾವಣಿಗೆ ಕಪ್ಪಗಿನ ಡ್ಯುಯಲ್-ಟೋನ್ ಪೇಂಟ್ ಅನ್ನು ಬಳಿಯಲಾಗಿದೆ. ಕಾರಿನ ಹೊರಭಾಗದ ಸುತ್ತಲೂ ಸಾಕಷ್ಟು ಕಪ್ಪು ಕ್ಲಾಡಿಂಗ್ ಕೂಡ ಇದೆ.
ನಾವು ಆಗಲೇ ಹೇಳಿದಂತೆ 2024 ಸಿಲ್ವೆರಾಡೊ ಇಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಒಮ್ಮೆ ಲಾಂಚ್ ಆಯ್ತು ಅಂತಾದರೆ, ಫೋರ್ಡ್ ಎಫ್-150 ಲೈಟ್ನಿಂಗ್, ರಿವಿಯನ್ ಆರ್11ಟಿ, ಜಿಎಮ್ ಸಿ ಹಮ್ಮರ್ ಇವಿ ಪಿಕ್-ಅಪ್ ಮತ್ತು ಟೆಸ್ಲಾ ಸೈಬರ್ ಟ್ರಕ್ ಮೊದಲಾದವುಗಳೊಂದಿಗೆ ಸ್ಪರ್ಧೆಗೆ ಬೀಳಲಿದೆ.
ಟಾಮ್-ಟ್ರಿಮ್ ಆರ್ ಎಸ್ ಟಿ ಮತ್ತು ಡಬ್ಲ್ಯೂಟಿ-ಬೇಸ್ ಆವೃತ್ತಿಗಳಲ್ಲಿ ಲಭ್ಯವಾಗಲಿರುವ 2024 ಸಿಲ್ವೆರಾಡೊ ಇಲೆಕ್ಟ್ರಿಕ್ ಪಿಕ್-ಅಪ್ ಟ್ರಕ್ ಬೆಲೆ ಅಮೇರಿಕನಲ್ಲಿ ಭಾರತೀಯ ಕರೆನ್ಸಿ ಪ್ರಕಾರ ರೂ. 30 ಲಕ್ಷಗಳಿಂದ ರೂ. 78 ಲಕ್ಷಗಳವರೆಗೆ ಇರಲಿದೆ. ಇದನ್ನು ಭಾರತದಲ್ಲಿ ಲಾಂಚ್ ಮಾಡುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಧೋನಿ-ಕೊಹ್ಲಿಯ ವಿಕೆಟ್ ಪಡೆದ ಪಾಕ್ ಬೌಲರ್ ಕಡಲೆಕಾಯಿ ಮಾರುತ್ತಿರುವ ವಿಡಿಯೋ ವೈರಲ್