Sadhguru Isha Foundation: ಜನ ಮನ ಸೊರೆಗೊಳ್ಳುತ್ತಿರುವ ಆದಿಯೋಗಿ ಲೇಸರ್ ಶೋ: ಮಂತ್ರ ಮುಗ್ದವಾಗಿಸುವ ಧ್ವನಿ ಮತ್ತು ಬೆಳಕು ಪ್ರದರ್ಶನ

| Updated By: ಸಾಧು ಶ್ರೀನಾಥ್​

Updated on: Sep 12, 2023 | 6:00 PM

Adiyogi Laser Show: ಆದಿಯೋಗಿಯ ಇತಿಹಾಸ, ಪುರಾಣದ ಕಥೆಯನ್ನು ಧ್ವನಿ ಮತ್ತು ಬೆಳಕಿನಲ್ಲಿ ಸಂಯೋಜನೆ ಮಾಡಲಾಗಿದೆ. ಅತ್ಯಾಧುನಿಕ 3ಡಿ ತಂತ್ರಜ್ಞಾನವನ್ನು ಬಳಸಿ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು, ಲೇಸರ್ ಶೋ ಸೃಷ್ಟಿsಸಿದ್ದಾರೆ. ಸ್ವತಃ ಈಶಾ ಪೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್‌ರವರ ಧ್ವನಿಯಲ್ಲಿ ನಿರೂಪಣೆ ಮಾಡಲಾಗಿದೆ. ಕಪ್ಪು ವಿಗ್ರಹದ ಮೇಲೆ ಕಲರ್‌ಪುಲ್ ಲೇಸರ್ ಶೋ ಪ್ರದರ್ಶನವೇ ಒಂದು ಅದ್ಬುತ.

112 ಅಡಿಗಳ ಆದಿಯೋಗಿ ಪ್ರತಿಮೆ ನೋಡುತ್ತಿದ್ದರೆ ಒಂದು ರೀತಿಯ ಭಕ್ತಿಯ ಉನ್ಮಾದ ಹೆಚ್ಚಾಗುತ್ತದೆ. ಇಂತಹದ್ದರಲ್ಲಿ ಆದಿಯೋಗಿ ಪ್ರತಿಮೆ ಮೇಲೆ ಪ್ರದರ್ಶನವಾಗುವ ಧ್ವನಿ ಮತ್ತು ಬೆಳಕಿನ ಲೇಸರ್ ಶೋ ಜನರ ಮನಸೊರೆಗೊಳ್ಳುತ್ತಿದೆ. ಅಷ್ಟಕ್ಕೂ ಅದು ಎಲ್ಲಿ ಹೇಗೆ ಅಂತೀರಾ ಈ ವಿಡಿಯೋ ನೋಡಿ…

112 ಅಡಿಗಳ ಆದಿಯೋಗಿ ಪ್ರತಿಮೆ ಇರುವುದು ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮದ ಬಳಿ ಇರುವ ಈಶಾ ಪೌಂಡೇಷನ್‌ನಲ್ಲಿ. ಆಧ್ಯಾತ್ಮಿಕ ಹಾಗೂ ಯೋಗಗುರು ಸದ್ಗುರು ಜಗ್ಗಿ ವಾಸುದೇವ್ ಪ್ರತಿಷ್ಠಾಪಿಸಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ಈಗ ರಾಜಧಾನಿ ಬೆಂಗಳೂರು ಜನರ ಮನಸೊರೆಗೊಂಡಿದೆ. ಇನ್ನು 112 ಅಡಿಗಳ ಆದಿಯೋಗಿ ಪ್ರತಿಮೆ ಮೇಲೆ ಪ್ರತಿದಿನ ರಾತ್ರಿ 7-00 ಗಂಟೆಯಿಂದ 8-00 ಗಂಟೆಯೊಳಗೆ ದಿವ್ಯದರ್ಶನಂ ಹೆಸರಿನಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ನಡೆಯುತ್ತಿದೆ. ಇದನ್ನು ನೋಡಲು ಪ್ರತಿದಿನ ಜನಸಾಗರವೇ ಆಗಮಿಸಿ ಕಣ್ಣು ತುಂಬಿಕೊಳ್ಳುತ್ತಿದೆ|

ಆದಿಯೋಗಿಯ ಇತಿಹಾಸ, ಪುರಾಣದ ಕಥೆಯನ್ನು ಧ್ವನಿ ಮತ್ತು ಬೆಳಕಿನಲ್ಲಿ ಸಂಯೋಜನೆ ಮಾಡಲಾಗಿದೆ. ಅತ್ಯಾಧುನಿಕ 3ಡಿ ತಂತ್ರಜ್ಞಾನವನ್ನು ಬಳಸಿ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು, ಲೇಸರ್ ಶೋ ಸೃಷ್ಟಿsಸಿದ್ದಾರೆ. ಸ್ವತಃ ಈಶಾ ಪೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್‌ರವರ ಧ್ವನಿಯಲ್ಲಿ ನಿರೂಪಣೆ ಮಾಡಲಾಗಿದೆ. ಕಪ್ಪು ವಿಗ್ರಹದ ಮೇಲೆ ಕಲರ್‌ಪುಲ್ ಲೇಸರ್ ಶೋ ಪ್ರದರ್ಶನವೇ ಒಂದು ಅದ್ಬುತ.

ಇನ್ನು ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಈಶಾ ಪೌಂಡೇಷನ್‌ನಲ್ಲಿ ಆದಿಯೋಗಿಯ ಲೇಸರ್ ಶೋ ನೋಡಲು ಪ್ರತಿದಿನ ರಾತ್ರಿ ಜನಸಾಗರವೇ ಹರಿದುಬರುತ್ತಿದ್ದು, ಶಿವನಭಕ್ತರ ಮನಸೊರೆಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.