ನಿರಂತರ ಮಳೆಗೆ ರಾತ್ರೋರಾತ್ರಿ ಕುಸಿದ ಪುರಾತನ ಬಾವಿ: ಗ್ರಾಮಸ್ಥರು ಶಾಕ್!
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗಣಪತಿಹಳ್ಳಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಗಣಪತಿ ದೇವಸ್ಥಾನದ ಮುಂದಿದ್ದ ಪುರಾತನ ಬಾವಿ ಸಂಪೂರ್ಣ ಕುಸಿದಿದೆ. ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬಾವಿಯ ಕಲ್ಲುಗಳು ರಾತ್ರೋ ರಾತ್ರಿ ಕುಸಿದಿವೆ. ಬಾವಿಯ ಕುರುಹೂ ಇಲ್ಲದಂತೆ ಮಾಯವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಮಗಳೂರು, ಅಕ್ಟೋಬರ್ 23: ಜಿಲ್ಲೆಯ ಹಲವೆಡೆ ಮಳೆ (rain) ಆರ್ಭಟ ಮುಂದುವರೆದಿದೆ. ಪರಿಣಾಮ ಕಡೂರು ತಾಲೂಕಿನ ಗಣಪತಿಹಳ್ಳಿ ಗ್ರಾಮದ ಗಣಪತಿ ದೇಗುಲ ಮುಂದೆ ಇದ್ದ ಬಾವಿ ಕುಸಿಬಿದಿರುವಂತಹ ಘಟನೆ ನಡೆದಿದೆ. ತೇವಾಂಶ ಹೆಚ್ಚಾದ ಹಿನ್ನೆಲೆ ಬಾವಿಯೊಳಗೆ ಕಟ್ಟಿದ್ದ ಕಲ್ಲುಗಳು ಕುಸಿದಿವೆ. ಕಳೆದ 4-5 ದಿನಗಳಿಂದ ಚಿಕ್ಕಮಗಳೂರು ನಗರ, ಕಡೂರು ಸೇರಿ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 23, 2025 08:27 AM

