AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಧಿಕಾರಿ ದಾಳ: ಯತೀಂದ್ರ ಹೇಳಿಕೆ ಬಗ್ಗೆ ಸಾಹುಕಾರ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಉತ್ತರಾಧಿಕಾರಿ ದಾಳ: ಯತೀಂದ್ರ ಹೇಳಿಕೆ ಬಗ್ಗೆ ಸಾಹುಕಾರ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

Sahadev Mane
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 23, 2025 | 10:01 AM

Share

ಸಿಎಂ ಸಿದ್ದರಾಮಯ್ಯ ನಂತರ ಪಕ್ಷದ ನಾಯಕತ್ವ ಕುರಿತು ಎಂಎಲ್​​ಸಿ ಯತೀಂದ್ರ ಹೇಳಿಕೆಗೆ ಸದ್ಯ ಸಾಕಷ್ಟು ಸಂಚಲ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಯತೀಂದ್ರ ಅವರದ್ದು ವೈಯಕ್ತಿಕ ನಿರ್ಧಾರ. ಅಂತಿಮವಾಗಿ ಪಕ್ಷ ಮತ್ತು ಶಾಸಕರು ನಾಯಕನನ್ನು ನಿರ್ಧರಿಸುತ್ತಾರೆ. ಅಲ್ಲದೆ, 2028ರಲ್ಲಿ ತಾನು ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತೇನೆ ಎಂದಿದ್ದಾರೆ.

ಬೆಳಗಾವಿ, ಅಕ್ಟೋಬರ್​​ 23: ಸಿಎಂ ಸಿದ್ದರಾಮಯ್ಯ (Siddaramaiah) ರಾಜಕೀಯ ಬದುಕಿನ ಕೊನೇ ಘಟ್ಟದಲ್ಲಿದ್ದಾರೆ. ಅವರ ಬಳಿಕ ಪಕ್ಷದಲ್ಲಿ ಮುಂದೆ ಮಾರ್ಗದರ್ಶನ ಮಾಡಲು, ಸಚಿವ ಸತೀಶ್ ಜಾರಕಿಹೊಳಿಯವರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಹೀಗಂತಾ ಎಂಎಲ್​​ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿರುವ ಮಾತು ಸದ್ಯ ರಾಜ್ಯ ರಾಜಕಾರಣದಲ್ಲಿ ನಾನಾ ರೀತಿಯ ವಿಶ್ಲೇಷಣೆಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು ಹೀಗೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.