ಅರುಣಾಚಲ ಪ್ರದೇಶದಲ್ಲಿರುವ ಕೆಲ ಸ್ಥಳಗಳ ಹೆಸರನ್ನು ಚೀನಾ ಬದಲಾಯಿಸಿದೆ, ಅದರಿಂದ ವಾಸ್ತವ ಬದಲಾಗದು ಎಂದಿದೆ ಭಾರತ!

ಚೀನಾ ಬದಲಾಯಿಸಿರುವ 15 ಸ್ಥಳಗಳಲ್ಲಿ 8 ಜನವಸತಿ ಪ್ರದೇಶಗಳು, ನಾಲ್ಕು ಪರ್ವತ ಪ್ರದೇಶಗಳು 2 ನದಿ ಮತ್ತು 1 ಮೌಂಟೇನ್ ಪಾಸ್ ಸೇರಿವೆ. ಅರುಣಾಚಲ ಪ್ರದೇಶದಲ್ಲಿರುವ ಸ್ಥಳಗಳ ಹೆಸರುಗಳನ್ನು ಚೀನಾ ಎರಡನೇ ಸಲ ಬದಲಾಯಿಸಿದೆ.

TV9kannada Web Team

| Edited By: Arun Belly

Jan 01, 2022 | 10:59 PM

ತಂಟೆಕೋರ ಚೀನಾ ಪುನಃ ತನ್ನ ಹುಚ್ಚು ತೆವಲುಗಳನ್ನು ಶುರುವಿಟ್ಟುಕೊಂಡಿದೆ. ನಾಯಿಬಾಲ ಡೊಂಕು ಅಂತ ಹೇಳುತ್ತಾರೆ ಅದರೆ ಚೀನಾದ ಬಾಲ ಅಂಕು-ಡೊಂಕು. ಅರುಣಾಚಲ ಪ್ರದೇಶವನ್ನು ಚೀನಾ ಜಂಗ್ನನ್ ಅಂತ ಕರೆಯುತ್ತದೆ. ಆ ದೇಶದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನನ್ ನಲ್ಲಿರುವ (ನಮ್ಮಅರುಣಾಚಲ ಪ್ರದೇಶ) 15 ಸ್ಥಳಗಳ ಟಿಬೆಟನ್ ಮತ್ತು ರೋಮನ್ ಅಕ್ಷರಾನುಕ್ರಮಣಿಯಲ್ಲಿದ್ದ ಹೆಸರುಗಳನ್ನು ಚೀನಾದ ಲಿಪಿಗೆ ಅನುರೂಪವಾಗುವ ಹಾಗೆ ಬದಲಾಯಿಸಿರುವುದಾಗಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಹೆಸರುಗಳನ್ನು ಚೀನಾ ಸರ್ಕಾರದ ಸಚಿವ ಸಂಪುಟ ಜಾರಿಮಾಡಿರುವ ಭೌಗೋಳಿಕ ಹೆಸರುಗಳಿಗೆ ಸಂಬಂಧಿಸಿದ ನಿಯಮಗಳಿಗೆ ಅನುರೂಪವಾಗಿ ಮಾಡಲಾಗಿದೆ ಅಂತಲೂ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಚೀನಾ ಬದಲಾಯಿಸಿರುವ 15 ಸ್ಥಳಗಳಲ್ಲಿ 8 ಜನವಸತಿ ಪ್ರದೇಶಗಳು, ನಾಲ್ಕು ಪರ್ವತ ಪ್ರದೇಶಗಳು 2 ನದಿ ಮತ್ತು 1 ಮೌಂಟೇನ್ ಪಾಸ್ ಸೇರಿವೆ. ಅರುಣಾಚಲ ಪ್ರದೇಶದಲ್ಲಿರುವ ಸ್ಥಳಗಳ ಹೆಸರುಗಳನ್ನು ಚೀನಾ ಎರಡನೇ ಸಲ ಬದಲಾಯಿಸಿದೆ. 2017ರಲ್ಲಿ ಅದು 6 ಸ್ಥಳಗಳ ಹೆಸರು ಬದಲಾಯಿಸಿ ಅ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿತ್ತು.

ಬೀಜಿಂಗ್ ನಲ್ಲಿರುವ ಚೀನಾ ಟಿಬೆಟೊಲಾಜಿ ಸಂಶೋಧನಾ ಕೇಂದ್ರದ ತಜ್ಞ ಲಿಯಾನ್ ಶಾಮಿನ್ ಅವರು ಗುರುವಾರದಂದು ಗ್ಲೋಬಲ್ ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಜಂಗ್ನನ್ನಲ್ಲಿರುವ (ನಮ್ಮ ಅರುಣಾಚಲ ಪ್ರದೇಶ) ಸ್ಥಳದ ಹೆಸರುಗಳ ನಿರ್ವಹಣೆಯನ್ನು ಪ್ರಮಾಣೀಕರಿಸುವ ರಾಷ್ಟ್ರೀಯ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದ್ದಾರೆ. ಸದರಿ ಸ್ಥಳಗಳು ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ.

ನಾಗರಿಕ ವ್ಯವಹಾರಗಳ ಸಚಿವಾಲಯ ಮಾಡಿರುವುದು ಕಾನೂನು ಬದ್ಧವಾಗಿದೆ ಮತ್ತು ಜಂಗನ್ ನಲ್ಲಿರುವ ಸ್ಥಳಗಳ ಹೆಸರುಗಳನ್ನು ತನಗೆ ಸರಿಯೆನಿಸುವ ಹಾಗೆ ಬದಲಾಯಿಸುವ ಸಾರ್ವಭೌಮ ಹಕ್ಕನ್ನು ಚೀನಾ ಹೊಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಥಳಗಳ ಹೆಸರು ಬದಲಾಯಿಲಾಗುವುದು ಅಂತ ಲಿಯಾಮ್ ಹೇಳಿದ್ದಾರೆ.

ಚೀನಾದ ಹುಚ್ಚಾಟಕ್ಕೆ ಗುರುವಾರ ಪ್ರತಿಕ್ರಿಯೆ ನೀಡಿರುವ ಭಾರತವು ಕೆಲ ಸಂಶೋಧಿತ ಹೆಸರುಗಳನ್ನು ಸ್ಥಳಗಳಿಗೆ ನೀಡುವುದರಿಂದ ಅರುಣಾಚಲ ಪ್ರದೇಶ ಹಿಂದೆಯೂ ಭಾರತದ ಅವಿಭಾಜ್ಯ ಅಂಗವಾಗಿತ್ತು, ಇವತ್ತೂ ಆಗಿದೆ ಮತ್ತು ಮುಂದೆ ಹಾಗೆ ಉಳಿಯಲಿದೆ ಎಂಬ ಸತ್ಯವನ್ನು ಬದಲಾಯಿಸಲಾಗದು ಎಂದು ಹೇಳಿದೆ.

‘ಇಂಥ ಪ್ರಯತ್ನವನ್ನು ನಾವು ಹಿಂದೆ ನೋಡಿದ್ದೇವೆ. ಅರುಣಾಚಲ ಪ್ರದೇಶದಲ್ಲಿರುವ ಕೆಲ ಸ್ಥಳಗಳ ಹೆಸರುಗಳನ್ನು ಚೀನಾ ಬದಲಾಯಿಸುತ್ತಿರುವುದು ಇದು ಮೊದಲ ಸಲವೇನಲ್ಲ. 2017 ರಲ್ಲೂ ಹಾಗೆ ಮಾಡಿದ್ದಾಗಿ ಖುದ್ದು ಚೀನಾ ಹೇಳಿತ್ತು,’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಾತ್ಮೀದಾರ ಅರಿಂದಮ್ ಬಗ್ಚಿ ಹೇಳಿದರು.

ಇದನ್ನೂ ಓದಿ:   Viral Video: ಬಿಸಿ ಎಣ್ಣೆಯೊಳಗೆ ಕೈ ಹಾಕಿ ಪಕೋಡ ಮಾಡಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada