Loading video

ಕಲಬುರಗಿ: ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಪಾದಯಾತ್ರೆ; ಸರಕಾರದ ವಿರುದ್ಧ ಘೋಷಣೆ ‌ಕೂಗಿ ಗ್ರಾಮಸ್ಥರ ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 06, 2024 | 3:57 PM

ರಾಜ್ಯದಲ್ಲಿ ಇತ್ತೀಚೆಗೆ ಸರ್ಕಾರ ಮಧ್ಯದ ದರ ಏರಿಕೆ ಮಾಡಿದೆ ಎಂಬ ವದಂತಿಗೆ ಅಬಕಾರಿ ಸಚಿವ ಆರ್​ಬಿ ತಿಮ್ಮಾಪುರ ಅವರು ಸ್ಪಷ್ಟನೆ ನೀಡಿ, ಇದು ಆಯಾ ಕಂಪನಿಗಳು ದರ ಏರಿಸಿದ್ದವು, ನಾವು ದರ ಹೆಚ್ಚಳ ಮಾಡಿಲ್ಲವೆಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮಸ್ಥರು, ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ 16 ಕಿ,ಮೀ ಪಾದಯಾತ್ರೆ ನಡೆಸಿದ್ದಾರೆ.

ಕಲಬುರಗಿ, ಫೆ.06: ರಾಜ್ಯದಲ್ಲಿ ಮದ್ಯದ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮಸ್ಥರು ಬರೊಬ್ಬರಿ 16 ಕಿ.ಮೀ ಪಾದಯಾತ್ರೆ ನಡೆಸಿದ್ದಾರೆ. ‘ನಮಗೆ ಬಿಯರ್, ಬ್ರ್ಯಾಂಡಿ,ರ ಬೇಡ. ಕುಡಿಯಲು ಶುದ್ಧ ನೀರು ಕೊಡಿ ಎಂದು ಹಸರಗುಂಡಗಿಯಿಂದ ಚಿಂಚೋಳಿ ತಾಲೂಕು ಕಚೇರಿಯವರಿಗೂ ಪಾದಯಾತ್ರೆ ನಡೆಸಿದ್ದು, ಗ್ರಾಮಸ್ಥರು ಸರ್ಕಾರದ ವಿರುದ್ಧ ಘೋಷಣೆ ‌ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಕ್ರಮ‌ ಮದ್ಯ ಮಾರಾಟ ತಡೆಗಟ್ಟಲು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ