ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಅಬಕಾರಿ ಆಯ್ತುಕ್ತ, ಶಾಸಕರ ನಡುವೆ ವಾಗ್ವಾದ

ಕೊಪ್ಪಳದ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಆಯ್ತುಕ್ತರು, ಶಾಸಕರ ನಡುವೆ ನಡೆದ ವಾಗ್ವಾದಿಂದ ಮುಜುಗರಕ್ಕೆ ಒಳಗಾಗದ ಸಚಿವ ಆನಂದ ಸಿಂಗ್​

ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಅಬಕಾರಿ ಆಯ್ತುಕ್ತ, ಶಾಸಕರ ನಡುವೆ ವಾಗ್ವಾದ
ಸಚಿವರ ಎದುರಲ್ಲೇ ಶಾಸಕ ಮತ್ತು ಅಧಿಕಾರಿಯ ವಾಗ್ವಾದ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 02, 2022 | 4:58 PM

ಕೊಪ್ಪಳ: ಅಕ್ರಮ ಮದ್ಯ ಮಾರಾಟದ (Illegal liquor sale) ವಿರುದ್ದ ಕ್ರಮ ಕೈಗೊಳ್ಳುವ ವಿಚಾರಕ್ಕೆ ಅಧಿಕಾರಿ ಹಾಗೂ ಜನಪ್ರತಿನಿದಿಗಳ ನಡುವೆ ವಾಗ್ವಾದ ನಡೆದಿದೆ. ಇಂದು (ನ.2) ಕೊಪ್ಪಳದ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ನಡೆದಿದೆ. ಸಭೆಯಲ್ಲಿ ಸಚಿವ ಆನಂದ ಸಿಂಗ್ (Anand Singh) ಎದುರಲ್ಲೇ ಕೊಪ್ಪಳ ಅಬಕಾರಿ ಆಯುಕ್ತೆ ಸಲೀನಾ ಹಾಗೂ ಕನಕಗಿರಿ ಶಾಸಕ ಬಸವರಾಜ ದಡೇಸೂಗುರು ನಡುವೆ ವಾಗ್ವಾದ ನಡೆದಿದೆ. ವೈನ್ ಶಾಪ್ ಮೇಲೆ ಎಫ್​​ಐಆರ್ ದಾಖಲಿಸಲಾಗಿದ್ದು, ಶಾಸಕ ದಡೇಸೂಗುರ್ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ಎಷ್ಟು ಕೇಸ್ ಹಾಕಿದ್ದಿರಿ ಎಂದು ಅಬಕಾರಿ ಆಯುಕ್ತೆ ಸಲೀನಾಗೆ ಪ್ರಶ್ನೆ ಮಾಡಿದರು.

ಈ ವಿಚಾರವಾಗಿ ವಗ್ವಾದ ಶುರುವಾಗಿದ್ದು, ಆಯುಕ್ತರು ಹಾಗೂ ಶಾಸಕರ ವಾಗ್ವಾದದಿಂದ ಸಚಿವ ಆನಂದ ಸಿಂಗ್​ ಮುಜುಗರಕ್ಕೊಳಗಾಗಿದ್ದರು. ನಂತರ ಇಬ್ಬರನ್ನು ಗದರಿಸಿ ಶಾಂತಗೊಳಿಸಲು ಸಚಿವ ಆನಂದ ಸಿಂಗ್ ಹರಸಾಹಸಪಟ್ಟರು.

ಅಬಕಾರಿ ಅಯುಕ್ತೆ ಸಲೀನಾ ಮೇಲೆ ಸಾಕಷ್ಠು ಆರೋಪಗಳಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಹಲವರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಸಲೀನಾ ವಿರುದ್ಧ ಕ್ರಮಕೈಗೊಳ್ಳುವಂತೆ ಶಾಸಕ ಅಮರೇಗೌಡ ಬಯ್ಯಾಪುರ ಒತ್ತಾಯ ಮಾಡಿದ್ದಾರೆ. ಶಾಸಕರು ಹಾಗೂ ಆಯುಕ್ತರ ವಾಗ್ವಾದದಿಂದ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Wed, 2 November 22