AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಂತಿ ಸಭೆಯಲ್ಲಿ ಅಶಾಂತಿ: ಚಿತ್ತಾಪುರ RSS ಪಥಸಂಚಲನ ಚೆಂಡು ಹೈಕೋರ್ಟ್​ ಅಂಗಳಕ್ಕೆ

ಶಾಂತಿ ಸಭೆಯಲ್ಲಿ ಅಶಾಂತಿ: ಚಿತ್ತಾಪುರ RSS ಪಥಸಂಚಲನ ಚೆಂಡು ಹೈಕೋರ್ಟ್​ ಅಂಗಳಕ್ಕೆ

ರಮೇಶ್ ಬಿ. ಜವಳಗೇರಾ
|

Updated on: Oct 29, 2025 | 3:31 PM

Share

ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರವಾದ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ನಡೆಯುತ್ತಿದೆ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್​ಎಸ್​​ಎಸ್​ ಕೊರ್ಟ್​​ ಮುಂದೆ ತಿಳಿಸಿದ್ದು, ಈ ಸಂಬಂಧ ಶಾಂತಿ ಸಭೆ ನಡೆಸುವಂತೆ ಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಕಲಬುರಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾರೀ ಹೈಡ್ರಾಮಾವೇ ನಡೆದಿದ್ದು, ಆರ್​ಎಸ್​ಎಸ್​​ ಹಾಗೂ ಭೀಮ್ ಆರ್ಮಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಸಭೆ ಅಶಾಂತಿಯಲ್ಲೇ ಅಂತ್ಯವಾಗಿದೆ.

ಕಲಬುರಗಿ, (ಅಕ್ಟೋಬರ್ 29): ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರವಾದ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ನಡೆಯುತ್ತಿದೆ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್​ಎಸ್​​ಎಸ್​ ಕೊರ್ಟ್​​ ಮುಂದೆ ತಿಳಿಸಿದ್ದು, ಈ ಸಂಬಂಧ ಶಾಂತಿ ಸಭೆ ನಡೆಸುವಂತೆ ಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಕಲಬುರಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾರೀ ಹೈಡ್ರಾಮಾವೇ ನಡೆದಿದ್ದು, ಆರ್​ಎಸ್​ಎಸ್​​ ಹಾಗೂ ಭೀಮ್ ಆರ್ಮಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಸಭೆ ಅಶಾಂತಿಯಲ್ಲೇ ಅಂತ್ಯವಾಗಿದೆ. ಹೀಗಾಗಿ ಆರ್​ಎಸ್​ಎಸ್​ ಚಿತ್ತಾಪುರ ಪಥಸಂಚಲನ ಚೆಂಡು ಕೋರ್ಟ್ ಅಂಗಳಕ್ಕೆ ಹೋಗಿದ್ದು, ಅಕ್ಟೋಬರ್ 30ರಂದು ಕೋರ್ಟ್ ಯಾವ ತೀರ್ಫು ನೀಡಲಿದೆ ಎನ್ನುವ ಕುತೂಹಲ ಮೂಡಿಸಿದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದತ್ತ ನೆಟ್ಟಿದೆ.

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More