ಹೆಲಿಕಾಪ್ಟರನ್ನು ಜೀಪಿಗೆ ಟೋ ಮಾಡಿಕೊಂಡು ಬೇರೆ ಸ್ಥಳಕ್ಕೆ ಸಾಗಿಸಿದ ತಾಲಿಬಾನಿಗಳು ಯುದ್ದ ವಿಮಾನಗಳನ್ನೂ ಏನು ಮಾಡುತ್ತಾರೋ?
ಹೆಲಿಕಾಪ್ಟರ್ ಹಾರಿಸಲು ಗೊತ್ತಿರದ ತಾಲಿಬಾನಿಗಳು, ಅದನ್ನು ಜೀಪೊಂದಕ್ಕೆ ಟೋ ಮಾಡಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಅಮೇರಿಕನ್ನರು ಲೆಕ್ಕವಿಲ್ಲದಷ್ಟು ಯುದ್ಧ ವಿಮಾನ, ಹೆಲಿಕಾಪ್ಟರ್ ಮತ್ತು ಆಯುಧಗಳನ್ನು ಈಗ ತಾಲಿಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನದಲ್ಲಿ ಬಿಟ್ಟು ಹೋಗಿದ್ದಾರೆ. ಹಿಂದೊಮ್ಮೆ, ನಾವು ತಾಲಿಬಾನಿಯೊಬ್ಬ ಅತ್ಯಾಧುನಿಕ ಗನ್ ಅನ್ನೋದು ಗೊತ್ತಾಗದೆ ಅದನ್ನು ಹಿಂದೆ-ಮುಂದೆ, ಕೆಳಗೆ-ಮೇಲೆ ಮಾಡಿ ನೋಡುತ್ತಿದ್ದ ವಿಡಿಯೋವನ್ನು ನಾವು ತೋರಿಸಿದ್ದೇವೆ. ಅನಕ್ಷರಸ್ಥ ತಾಲಿಬಾನಿಗಳ ಕತೆ ಇದು.
ಈ ವಿಡಿಯೋ ನೋಡಿ. ಹೆಲಿಕಾಪ್ಟರ್ ಹಾರಿಸಲು ಗೊತ್ತಿರದ ತಾಲಿಬಾನಿಗಳು, ಅದನ್ನು ಜೀಪೊಂದಕ್ಕೆ ಟೋ ಮಾಡಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾರಬೇಕಿದ್ದ ಚಾಪರ್ ನಾಲ್ಕು ಚಕ್ರದ ಒಂದು ವಾಹನದ ಹಾಗೆ ಮುಂದೆ ಸಾಗುತ್ತಿದೆ. ಇಂಥ ಸಾಕಷ್ಷು ದೃಶ್ಯಗಳನ್ನು ನಾವು ಮುಂದೆ ನೋಡಲಿದ್ದೇವೆ.
ಬಿಡಿ, ಹೆಲಿಕಾಪ್ಟರ್ ಎಲ್ಲರೂ ಹಾರಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ತರಬೇತಿ ಮತ್ತು ಅನುಭವ ಬೇಕು. ಈ ತಾಲಿಬಾನಿಗಳಿಗೆ ಗುಂಡು ಹಾರಿಸಿ, ಬಾಂಬ್ ಸ್ಫೋಟಿಸಿ ಅಮಾಯಕ ಜನರನ್ನು ಕೊಲ್ಲುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅಸಹಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುವುದು, ಅಪ್ರಾಪ್ತ ಬಾಲಕಿಯನ್ನು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳವುದು, ಪ್ರತಿಭಟಿಸಿದರೆ ಹಿಂಸಿಸುವುದು ಇಲ್ಲವೇ ಕೊಲ್ಲವುದು-ಇವರ ಅರ್ಹತೆಗಳು ಇವೇ.
ಅಮೇರಿಕ ಮತ್ತು ಮಿತ್ರಪಡೆಯ ಸೇನೆಗಳು ಅಫ್ಘಾನಿಸ್ತಾನದಿಂದ ಹೊರಟು ಬಿಟ್ಟಿವೆ. ಇನ್ನು ಅಲ್ಲಿ ತಾಲಿಬಾನಿಗಳ ರಕ್ಕಸ ರಾಜ್ಯ.
ಇದನ್ನೂ ಓದಿ: 6,522 ಮೀಟರ್ ಎತ್ತರದಲ್ಲಿ ಎರಡು ಏರ್ ಬಲೂನ್ಗಳ ನಡುವಿನ ಹಲಗೆಯ ಮೇಲೆ ನಡೆದು ಸಾಗಿದ ವ್ಯಕ್ತಿ; ಮೈ ಜುಂ ಎನ್ನಿಸುವ ವಿಡಿಯೋ ವೈರಲ್