ಬ್ಯಾಂಕ್​ಗಳ ಮುಂದೆ ದಿನಗಟ್ಟಲೆ ಕಾಯ್ದರೂ ಆಫ್ಘನ್ನರಿಗೆ ತಮ್ಮ ಹಣ ಸಿಗುವ ಭರವಸೆಯಿಲ್ಲ!

ಬ್ಯಾಂಕ್​ಗಳ ಮುಂದೆ ದಿನಗಟ್ಟಲೆ ಕಾಯ್ದರೂ ಆಫ್ಘನ್ನರಿಗೆ ತಮ್ಮ ಹಣ ಸಿಗುವ ಭರವಸೆಯಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2021 | 2:02 AM

ಅಫ್ಘಾನಿಸ್ತಾನಕ್ಕೆ ದಾರಿದ್ರ್ಯ ಅಪ್ಪಳಿಸಿದೆ. ಸರ್ಕಾರೀ ಬೊಕ್ಕಸ ಖಾಲಿ ಖಾಲಿ. ಇದ್ದ ಬದ್ದ ಹಣವನ್ನೆಲ್ಲ ಅಧ್ಯಕ್ಷರಾಗಿದ್ದ ಆಶ್ರಫ್ ಘನಿ ಬಾಚಿಕೊಂಡು ಯುಇಏಗೆ ಪಲಾಯನಗೈದಿದ್ದಾರೆ. ಸರ್ಕಾರ ನಡೆಸಲು ತಾಲಿಬಾನಿಗಳ ಕೈಯಲ್ಲಿ ದುಡ್ಡಿಲ್ಲ.

ನಮ್ಮಲ್ಲಿ ಬ್ಯಾಂಕುಗಳು ಅಥವಾ ಸಹಕಾರಿ ಸಂಘಗಳಲು ತಮ್ಮನ್ನು ವಂಚಿಸುತ್ತಿರುವ ಸುಳಿವು ಸಿಕ್ಕ ಕೂಡಲೇ ಖಾತೆ ಹೊಂದಿರುವವರು, ಠೇವಣಿ ಹೂಡಿರುವವರು ತಮ್ಮ ಹಣವನ್ನು ಹಿಂತೆಗೆದುಕೊಳ್ಳಲು ಧಾವಿಸುವಂತೆಯೇ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗುತ್ತಿರುವ ಹಾಗೆ, ಮುಂದಿನ ದಿನಗಳ ಅನಿಶ್ಚಿತತೆಗಳ ಬಗ್ಗೆ ಗಾಬರಿಯಾಗಿರುವ ಜನ ತಾವು ಹೂಡಿರುವ ಹಣವನ್ನು ಹಿಂತೆಗೆದುಕೊಳ್ಳಲು ಬ್ಯಾಂಕ್ಗಳ ಮುಂದೆ ಘೇರಾಯಿಸುತ್ತಿದ್ದಾರೆ. ಇಲ್ಲಿರುವ ವಿಡಿಯೋ ನೋಡಿ, ಮೈಲುದ್ದದ ಸಾಲುಗಳು ಅಲ್ಲಿನ ಎಲ್ಲ ಬ್ಯಾಂಕ್ ಗಳ ಮುಂದೆ ಈಗ ಕಾಣಸಿಗುತ್ತಿದೆ. ಜನ ಹತಾಷರಾಗಿ ಹಣ ವಾಪಸ್ಸು ಪಡೆಯಲು ಬಯಸುತ್ತಿದ್ದಾರೆ.

ಆಡಳಿತ ಕೈಗೆತ್ತಿಕೊಳ್ಳುತ್ತಿರುವಂತೆಯೇ ಬ್ಯಾಂಕ್ಗಳಲ್ಲಿರುವ ಹಣವನ್ನು ತಾಲಿಬಾನಿಗಳು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆಂಬ ಶಂಕೆಯೂ ಜನರನ್ನು ಕಾಡುತ್ತಿದೆ. ಅಫ್ಘಾನಿಸ್ತಾನಕ್ಕೆ ದಾರಿದ್ರ್ಯ ಅಪ್ಪಳಿಸಿದೆ. ಸರ್ಕಾರೀ ಬೊಕ್ಕಸ ಖಾಲಿ ಖಾಲಿ. ಇದ್ದ ಬದ್ದ ಹಣವನ್ನೆಲ್ಲ ಅಧ್ಯಕ್ಷರಾಗಿದ್ದ ಆಶ್ರಫ್ ಘನಿ ಬಾಚಿಕೊಂಡು ಯುಇಏಗೆ ಪಲಾಯನಗೈದಿದ್ದಾರೆ. ಸರ್ಕಾರ ನಡೆಸಲು ತಾಲಿಬಾನಿಗಳ ಕೈಯಲ್ಲಿ ದುಡ್ಡಿಲ್ಲ.

ಶ್ರೀಮಂತರು ಮತ್ತು ಉದ್ಯಮಿಗಳಿಂದ ಹಣ ಪೀಕಿ ಅವರು ಎಷ್ಟುದಿನ ತಾನೆ ಸರ್ಕಾರ ನಡೆಸಬಲ್ಲರು? ಅಮೇರಿಕ ಮತ್ತು ಇತರ ಐರೋಪ್ಯ ದೇಶಗಳು ಹಣಕಾಸಿನ ನೆರವು ನೀಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿವೆ.

ಜನರೇನೋ ಹಣ ವಿತ್ಡ್ರಾ ಮಾಡಿಕೊಳ್ಳಲು ಬ್ಯಾಂಕುಗಳಿಗೆ ಮುಗಿಬಿದ್ದಿದ್ದಾರೆ, ಆದರೆ ಬ್ಯಾಂಕ್ಗಳಲ್ಲಿ ದುಡ್ಡಿದೆಯೋ ಇಲ್ಲವೋ ಅನ್ನೋದು ಆವರಿಗೆ ಖಾತರಿಯಿಲ್ಲ. ಸೆಂಟ್ರಲ್ ಬ್ಯಾಂಕಿನ ಗವರ್ನರ್ ಅಜ್ಮಲ್ ಅಹ್ಮದಿ ಸಹ ದೇಶ ತೊರೆದಿದ್ದಾರೆ.

ಇದನ್ನೂ ಓದಿ: CPL 2021: ಡ್ರೆಸಿಂಗ್ ಕೋಣೆಯ ಕಿಟಕಿ ಗಾಜು ಒಡೆದ ಕ್ರಿಸ್ ಗೇಲ್ ಸಿಡಿಲಬ್ಬರದ ಸಿಕ್ಸರ್! ವಿಡಿಯೋ ನೋಡಿ