ವಿಷಯವೊಂದರ ಮೇಲೆ ಒಂದೇ ವೇದಿಕೆಯಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಬೇರೆ ಬೇರೆ ಹೇಳಿಕೆ ನೀಡುತ್ತಾರೆ: ನಿಖಿಲ್ ಕುಮಾರಸ್ವಾಮಿ
ಸಾರ್ವಜನಿಕ ಬದುಕಿನಲ್ಲಿರುವ ಇವರಿಬ್ಬರು ಮಾತಾಡುವ ಮೊದಲು ತಮ್ಮತಮ್ಮೊಳಗೆ ಚರ್ಚೆ ಮಾಡಿಕೊಳ್ಳುವುದಾದರೂ ಬೇಡ್ವಾ? ಒಬ್ಬರು ಒಂದು ಹೇಳುತ್ತಾರೆ ಮತ್ತೊಬ್ಬರ ಇನ್ನೊಂದು ಹೇಳುತ್ತಾರೆ ಎಂದು ನಿಖಿಲ್ ಹೇಳಿದರು. ಅವರಾದರೋ ಉನ್ನತ ಸ್ಥಾನಗಳಲ್ಲಿರುವವರು, ನಾನು ಈಗಷ್ಟೇ ರಾಜಕಾರಣಕ್ಕೆ ಬಂದು ಅಂಬೆಗಾಲಿಡುತ್ತಿರುವವನು, ಅವರು ಮಾತಾಡುವಾಗ ಎಚ್ಚರದಿಂದ ಮಾತಾಡುವುದು ಒಳಿತು ಎಂದು ಹೇಳಿದರು.
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧಿಸುವುದನ್ನು ಇಂದು ಪಕ್ಷದ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೆಚ್ಚುಕಡಿಮೆ ಖಚಿತಪಡಿಸಿದರು. ಕಾರ್ಯಕರ್ತರ ಸಭೆಯಲ್ಲಿ ನಿಖಿಲ್ ಮಾತಾಡುವುದನ್ನು ಕೇಳುತ್ತಿದ್ದಾಗ ಆತ್ಮವಿಶ್ವಾಸಕ್ಕೆ ಅವರಲ್ಲಿ ಕೊರತೆ ಇರಲಿಲ್ಲ ಅನಿಸಿತು. ಒಂದೇ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) 2019ರ ಮಂಡ್ಯ ಲೋಕಸಭಾ ಉಪ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿ ಮೂದಲಿಸಿದರು. ಅ ನಿರ್ದಿಷ್ಟ ಚುನಾವಣೆಯಲ್ಲಿ ಆ ತಾಯಿ (ಸುಮಲತಾ ಅಂಬರೀಶ್) ಗೆಲುವಿಗೆ ಕಾರಣವಾಗಿದ್ದು ಕಾಂಗ್ರೆಸ್ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಶಿವಕುಮಾರ್ ಅವರು, ತಾನು ಮತ್ತು ಕುಮಾರಸ್ವಾಮಿ ಜೋಡೆತ್ತುಗಳಂತೆ ಕೆಲಸ ಮಾಡಿ ನಿಖಿಲ್ ಗೆಲುವಿಗೆ ಶ್ರಮಿಸಿದೆವು ಅನ್ನುತ್ತಾರೆ. ಯಾರನ್ನು ನಂಬೋದು ಸ್ವಾಮಿ? ಸಾರ್ವಜನಿಕ ಬದುಕಿನಲ್ಲಿರುವ ಇವರಿಬ್ಬರು ಮಾತಾಡುವ ಮೊದಲು ತಮ್ಮತಮ್ಮೊಳಗೆ ಚರ್ಚೆ ಮಾಡಿಕೊಳ್ಳುವುದಾದರೂ ಬೇಡ್ವಾ? ಒಬ್ಬರು ಒಂದು ಹೇಳುತ್ತಾರೆ ಮತ್ತೊಬ್ಬರ ಇನ್ನೊಂದು ಹೇಳುತ್ತಾರೆ ಎಂದು ನಿಖಿಲ್ ಹೇಳಿದರು. ಅವರಾದರೋ ಉನ್ನತ ಸ್ಥಾನಗಳಲ್ಲಿರುವವರು, ನಾನು ಈಗಷ್ಟೇ ರಾಜಕಾರಣಕ್ಕೆ ಬಂದು ಅಂಬೆಗಾಲಿಡುತ್ತಿರುವವನು, ಅವರು ಮಾತಾಡುವಾಗ ಎಚ್ಚರದಿಂದ ಮಾತಾಡುವುದು ಒಳಿತು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ