Order regarding 5 guarantees: ಐದು ಗ್ಯಾರಂಟಿಗಳ ಅನುಷ್ಠಾನ; ಹಣಕಾಸು ನಿಗಮ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಚರ್ಚೆ
ಸರ್ಕಾರ ಹೊರಡಿಸಲಿರುವ ಆದೇಶಕ್ಕಾಗಿ ಜನ ಕಾತುರದಿಂದ ಎದುರು ನೋಡುತ್ತಿರುವುದಂತೂ ಸತ್ಯ.
ಬೆಂಗಳೂರು: ಕಾಂಗ್ರೆಸ್ ಪಕ್ಷ (Congress Party) ಅಧಿಕಾರಕ್ಕೆ ಬರುವ ಮೊದಲು ಜನತೆಗೆ 5 ಗ್ಯಾರಂಟಿಗಳ ಜೊತೆಗೆ ಹಲವಾರು ಆಶ್ವಾಸನೆಗಳನ್ನು ನೀಡಿದೆ. ಪ್ರಮುಖ 5 ಗ್ಯಾರಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಮತ್ತು ಆದೇಶ ಹೊರಡಿಸುವುದು ಬಾಕಿ ಇದೆ. ಆದೇಶ ಹೊರಡಿಸುವುದಯ ವಿಳಂಬಗೊಂಡರೆ ಜನ ರೊಚ್ಚಿಗೇಳುತ್ತಾರೆ ಮತ್ತು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ ಅನ್ನೋ ಸಂಗತಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಬ್ಬರಿಗೂ ಚೆನ್ನಾಗಿ ಗೊತ್ತಿದೆ. ಹಾಗಾಗೇ, ಅವರು ರಾಜ್ಯದ ಪ್ರಸಕ್ತ ಹಣಕಾಸು ಸ್ಥಿತಿಯ ಬಗ್ಗೆ ಹಣಕಾಸು ನಿಗಮದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸರ್ಕಾರ ಹೊರಡಿಸಲಿರುವ ಆದೇಶಕ್ಕಾಗಿ ಜನ ಕಾತುರದಿಂದ ಎದುರು ನೋಡುತ್ತಿರುವುದಂತೂ ಸತ್ಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos