ರಾಜ್ಯಪಾಲರನ್ನು ಅವಮಾನಿಸಿರುವ ಸಿಎಂ, ಡಿಸಿಎಂ ಮತ್ತು ಗೃಹಮಂತ್ರಿ ಕ್ಷಮೆ ಕೇಳಬೇಕು: ಕೆಎಸ್ ಈಶ್ವರಪ್ಪ

|

Updated on: Sep 02, 2024 | 3:48 PM

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಜಿ ಪರಮೇಶ್ವರ್ ಅವರು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ, ಹಾಗಾಗಿ ಬೇಷರತ್ತಾಗಿ ಮತ್ತು ಸಾರ್ವಜನಿಕವಾಗಿ ಅವರು ರಾಜ್ಯಪಾಲರ ಮತ್ತು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ನಗರದಲ್ಲಿಂದು ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪನವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹಸಚಿವರನ್ನು ಒಳಗೊಂಡಂತೆ ಕಾಂಗ್ರೆಸ್ ನಾಯಕರು ಸಂವೈಧಾನಿಕವಾಗಿ ಅತ್ಯಂತ ಉನ್ನತ ಹುದ್ದೆಯಲ್ಲಿರುವ ರಾಜ್ಯಪಾಲರ ವಿಷಯದಲ್ಲಿ ಬಹಳ ಕೆಟ್ಟದ್ದಾಗಿ ನಡೆದುಕೊಂಡಿದ್ದಾರೆ, ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅದನ್ನು ಸುಡುವ ಮೂಲಕ ತೀವ್ರ ಸ್ವರೂಪದ ಅಪಮಾನವೆಸಗಿದ್ದಾರೆ, ಬಹಳ ನೊಂದು ಮತ್ತು ಅತೀವ ವೇದನೆಯಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿಯ 22 ಶಾಸಕರ ಪಾದಯಾತ್ರೆ ತಡೆಯದಿದ್ದರೆ ಪಕ್ಷಕ್ಕೆ ಆಪತ್ತು ಎದುರಾಗಲಿದೆ: ಕೆಎಸ್ ಈಶ್ವರಪ್ಪ