ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಈ ಚಾನ್ಸ್ ಮಿಸ್ ಮಾಡ್ಕೋಬೇಡಿ

Updated on: Oct 19, 2026 | 4:33 PM

ಮೈಸೂರು ದಸರಾ ಮಹೋತ್ಸವವನ್ನು ವೀಕ್ಷಿಸಲು ಬರುತ್ತಿದ್ದೀರಾ? ಹಾಗಿದ್ರೆ ದಸರಾ ಸಂಭ್ರಮವನ್ನು ರೀಲ್ಸ್ ಮೂಲಕ ಕ್ರಿಯೇಟಿವಿಟಿ ತೋರಿಸಲು ಇದು ಉತ್ತಮ ಅವಕಾಶ. ಹೌದು...ದಸರಾ ಕಾರ್ಯಕ್ರಮಗಳ ಕುರಿತು ರೀಲ್ಸ್ ಮಾಡುವ ಕಂಟೆಂಟ್ ಕ್ರಿಯೇಟರ್‌ಗಳ ಪೈಕಿ 100 ಅತ್ಯುತ್ತಮ ರೀಲ್ಸ್‌ಗಳಿಗೆ ಸಿಎಂ ಡಿಕೆ ಶಿವಕುಮಾರ ಅವರು ಬಹುಮಾನ ಘೋಷಣೆ ಮಾಡಿದ್ದಾರೆ. ಆದರೆ ಏನು ಬಹುಮಾನ ಎನ್ನುವುದು ಸ್ಪಷ್ಟವಾಗಿ ಹೇಳಿಲ್ಲ. ಒಟ್ಟಿನಲ್ಲಿ ಚೆನ್ನಾಗಿರುವ 100 ರೀಲ್ಸ್​​ಗಳಿಗೆ ಬಹುಮಾನ ಫಿಕ್ಸ್ ಎಂದಿದ್ದಾರೆ.

ಬೆಂಗಳೂರು, (ಅಕ್ಟೋಬರ್ 19): ಮೈಸೂರು ದಸರಾ ಮಹೋತ್ಸವವನ್ನು ವೀಕ್ಷಿಸಲು ಬರುತ್ತಿದ್ದೀರಾ? ಹಾಗಿದ್ರೆ ದಸರಾ ಸಂಭ್ರಮವನ್ನು ರೀಲ್ಸ್ ಮೂಲಕ ಕ್ರಿಯೇಟಿವಿಟಿ ತೋರಿಸಲು ಇದು ಉತ್ತಮ ಅವಕಾಶ. ಹೌದು…ದಸರಾ ಕಾರ್ಯಕ್ರಮಗಳ ಕುರಿತು ರೀಲ್ಸ್ ಮಾಡುವ ಕಂಟೆಂಟ್ ಕ್ರಿಯೇಟರ್‌ಗಳ ಪೈಕಿ 100 ಅತ್ಯುತ್ತಮ ರೀಲ್ಸ್‌ಗಳಿಗೆ ಸಿಎಂ ಡಿಕೆ ಶಿವಕುಮಾರ ಅವರು ಬಹುಮಾನ ಘೋಷಣೆ ಮಾಡಿದ್ದಾರೆ. ಆದರೆ ಏನು ಬಹುಮಾನ ಎನ್ನುವುದು ಸ್ಪಷ್ಟವಾಗಿ ಹೇಳಿಲ್ಲ. ಒಟ್ಟಿನಲ್ಲಿ ಚೆನ್ನಾಗಿರುವ 100 ರೀಲ್ಸ್​​ಗಳಿಗೆ ಬಹುಮಾನ ಫಿಕ್ಸ್ ಎಂದಿದ್ದಾರೆ.

ಜಂಬೂಸವಾರಿ, ಅರಮನೆಯ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಡ್ರೋನ್ ಪ್ರದರ್ಶನ ಸೇರಿದಂತೆ ಹತ್ತಾರು ವಿಶೇಷ ಆಕರ್ಷಣೆಗಳು. ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅತ್ಯುತ್ತಮ ರೀಲ್ಸ್‌ಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಯೋಜನೆ ರೂಪಿಸಲಾಗಿದೆ.  ದಸರಾ ಮಹೋತ್ಸವದ ವೇಳೆ ನೀವು ವೀಕ್ಷಿಸುವ ಕಾರ್ಯಕ್ರಮ, ಮನಸೆಳೆಯುವ ದೃಶ್ಯ ಅಥವಾ ಹಬ್ಬದ ವಿಶೇಷ ಕ್ಷಣಗಳನ್ನು  ಚಿತ್ರೀಕರಿಸಿ ರೀಲ್ಸ್ ರೂಪದಲ್ಲಿ ಹಂಚಿಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More